ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಝಡ್ ಪ್ಲಸ್ ಭದ್ರತೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗೆ ಕೇಂದ್ರ ಗೃಹ ಇಲಾಖೆ  ಝಡ್ ಪ್ಲಸ್ ಭದ್ರತೆ ನೀಡಿದೆ. ಸಿಐಎಸ್ ಎಫ್ ನ ವಿಶೇಷ ಕಮಾಂಡೋಗಳಿರುವ ತಂಡವೊಂದು ಮೋಹನ್ ಭಾಗವತ್ ಗೆ ಸೆಕ್ಯೂರಿಟಿ ನೀಡಲಿದೆ. ನಾಗಪುರದಲ್ಲಿರುವ ಆರ್ ಎಸ್ ಎಸ್ ಪ್ರಧಾನ ಕಚೇರಿ ಸೇರಿದಂತೆ  ದೇಶಾದ್ಯಂತ ಮೋಹನ್ ಭಾಗವತ್ ಎಲ್ಲಿ ಸಂಚರಿಸಿದರೂ ಝಡ್ ಪ್ಲಸ್ ಭದ್ರತೆ ಇರುತ್ತದೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2013 ರಲ್ಲಿ ಮೊದಲ ಬಾರಿಗೆ ಮನವಿ ಸಲ್ಲಿಸಲಾಗಿತ್ತು, ಆದರೆ ಆಗ ಸಿಐಎಸ್ಎಫ್ ಝಡ್ ಪ್ಲಸ್ ಭದ್ರತೆ ಯನ್ನು ನಿರಾಕರಿಸಿತ್ತು. ಈಗ ಅಂದರೆ ಅಧಿಕಾರದಲ್ಲಿರುವ ಎನ್ ಡಿ ಎ ಸರ್ಕಾರ ಮತ್ತೆ ಆ ಮನವಿಯನ್ನು ಪರಿಶೀಲಿಸಿದ ಕೇಂದ್ರ ಗೃಹ ಸಚಿವಾಲಯ ಝಡ್ ಪ್ಲಸ್ ಭದ್ರತೆಗೆ ಅನುಮತಿ ನೀಡಿದೆ. ಸುಮಾರು 60 ಕಮಾಂಡೋಗಳಿರುವ ತಂಡ ಮೋಹನ್ ಭಾಗವತ್ ಗೆ ದಿನದ 24 ಗಂಟೆಯೂ ಭದ್ರತೆ ಒದಗಿಸಲಿದ್ದಾರೆ.
ಮೋಹನ್ ಭಾಗವತ್ ಗೆ ಜೀವ ಬೆದರಿಕೆ ಇರುವುದರಿಂದ ವಿಶೇಷ ತರಭೇತಿ ಪಡೆದಿರುವ ಕಮಾಂಡೋಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com