ಕೇಜ್ರಿವಾಲ್, ತೋಮರ್ ರಾಜನಾಮೆ ನೀಡಲಿ: ಕಾಂಗ್ರೆಸ್

ದೆಹಲಿ ಕಾನೂನು ಸಚಿವರ ನಕಲಿ ಪ್ರಮಾಣ ಪತ್ರ ವಿವಾದ ಪ್ರತಿಪಕ್ಷಗಳ ಮಧ್ಯೆ ಕಾವೇರಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಿತೇಂದರ್ ಸಿಂಗ್ ತೋಮರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ...
ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಕೇನ್
ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಕೇನ್

ನವದೆಹಲಿ: ದೆಹಲಿ ಕಾನೂನು ಸಚಿವರ ನಕಲಿ ಪ್ರಮಾಣ ಪತ್ರ ವಿವಾದ ಪ್ರತಿಪಕ್ಷಗಳ ಮಧ್ಯೆ ಕಾವೇರಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಿತೇಂದರ್ ಸಿಂಗ್ ತೋಮರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಕೇನ್ ಅವರು, ಅಧಿಕಾರಕ್ಕೆ ಬರುವಾಗ ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರುದ್ಧ ಕುರಿತಂತೆ ಮಾತನಾಡುತ್ತಿದ್ದರು. ಹೋರಾಟ ನಡೆಸುತ್ತಿದ್ದರು. ಇದೀಗ ಅವರ ಪಕ್ಷದಲ್ಲೇ ಭ್ರಷ್ಟಾಚಾರ ನಡೆದು ಅಧಿಕಾರಿಯೊಬ್ಬ ಬಂಧನಕ್ಕೊಳಗಾಗಿದ್ದಾರೆ. ಇದಕ್ಕೆ ಕೇಜ್ರಿವಾಲ್ ಏನೆಂದು ಉತ್ತರ ನೀಡುತ್ತಾರೆ ಎಂದು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ.

ಜಿತೇಂದರ್ ಸಿಂಗ್ ತೋಮರ್ ಪ್ರಕರಣದ ನೈತಿಕ ಹೊಣೆಯನ್ನು ಅರವಿಂದ್ ಕೇಜ್ರಿವಾಲ್ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಹಾಗೆಯೇ ಪ್ರಕರಣದ ಆರೋಪಿಯಾಗಿರುವ ತೋಮರ್ ಸಹ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರ ನಕಲಿ ಪ್ರಮಾಣ ಪತ್ರ ವಿವಾದ ಹೈಕೋರ್ಟ್ ನಲ್ಲಿರುವಾಗಲೇ, ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಆರೋಪದ ಮೇಲೆ ದೆಹಲಿ ಪೊಲೀಸರು ತೋಮರ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಇಂದು ಬಂಧನಕ್ಕೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com