ತೆರೇಸಾ, ಇಂದಿರಾ, ಶಾರುಖ್, ಹಿಟ್ಲರ್ ಪದಗಳಿಗೆ ಸಂಸತ್ ಕತ್ತರಿ

ನೊಬೆಲ್ ಶಾಂತಿ ಪುರಸ್ಕೃತ ಮದರ್ ಥೆರೇಸಾ, ಇಂದಿರಾ ಗಾಂಧಿ ಶಾರೂಖ್ ಖಾನ್ ಮತ್ತು ಹಿಟ್ಲರ್‍ಗೂ ಏನು ಸಂಬಂಧ? ಇವೆಲ್ಲ ಖ್ಯಾತನಾಮರ ಹೆಸರುಗಳೇನೋ...
ಸಂಸತ್
ಸಂಸತ್

ನವದೆಹಲಿ: ನೊಬೆಲ್ ಶಾಂತಿ ಪುರಸ್ಕೃತ ಮದರ್ ಥೆರೇಸಾ, ಇಂದಿರಾ ಗಾಂಧಿ ಶಾರೂಖ್ ಖಾನ್ ಮತ್ತು ಹಿಟ್ಲರ್‍ಗೂ ಏನು ಸಂಬಂಧ? ಇವೆಲ್ಲ ಖ್ಯಾತನಾಮರ ಹೆಸರುಗಳೇನೋ ನಿಜ. ಆದರೆ, ಕಳೆದೊಂದು ವರ್ಷದಲ್ಲಿ ಲೋಕಸಭೆಯಲ್ಲಿ ಈ ನಾಲ್ಕೂ ಹೆಸರುಗಳು ಪ್ರಸ್ತಾಪವಾದಗಲೆಲ್ಲ ಒಂದಾ ಈ ಹೆಸರನ್ನು ಕಡತಗಳಿಂದ ನಾಶ ಮಾಡಲಾಗಿದೆ ಅಥವಾ ದಾಖಲಿಸಿ ಕೊಂಡೇ ಇಲ್ಲ! ಈ ಬಗ್ಗೆ ``ಇಂಡಿಯನ್ ಎಕ್ಸ್ ಪ್ರೆಸ್'' ವರದಿ ಮಾಡಿದೆ. 16ನೇ ಲೋಕಸಭೆಯಲ್ಲಿ ಸುಮಾರು 206 ಪದಗಳು, ಟೀಕೆಗಳನ್ನು ಕಡತದಿಂದ
ತೆಗೆದುಹಾಕಲಾಗಿದೆ. ಮಾನಹಾನಿಕಾರ, ದೋಷಾ ರೋಪಣೆ, ಅಸಾಂಸದಾಯಿಕ,ಸಂಸತ್ತಿನ ಹೊರಗಿನ ವ್ಯಕ್ತಿಗಳಿಗೆ ಸಂಬಂಧಿಸಿದ್ದು ಎನ್ನುವ ಕಾರಣಕ್ಕೆ ತೆಗೆದುಹಾಕಲಾಗಿದೆ. ಅವುಗಳು, ಕಳ್ಳನೊಬ್ಬನನ್ನು ಕಳ್ಳ ಎಂದು ಕರೆಯಬಾರದೇ?, ಜೀಜಾ, ಉಲ್ಟಾ ಛೋರ್ ಕೊತ್ವಾಲ್ ಕೊ ಡಾಂಟೇ, ಛೋರ್ ಛೋರ್ ಮಾಸೆರೇ ಭಾಯ್, ಕಾಲೆ ಅಂಗ್ರೇಜ್ ಆ ಗಯೇ ಹೇ ಕಾಂಗ್ರೆಸ್ ಕಿ ರೂಪ್ ಮೇ, ಕಲ್ ಕೊ ಮೇರೆ ಗಲಾ ಗೋಟ್ ದಿಯಾ ತೊ ಪೂರಾ ಹಿ ಖತಂ ಹೋ ಜಾವೂಂಗ, ಆರೆಸ್ಸೆಸ್, ಸಾಮ್ನಾ, ಭಾಗ್ ಮಮತಾ ಭಾಗ್ ಮತ್ತಿತರ ಪದಗಳು ಕಡತಕ್ಕೆ ಸೇರ್ಪಡೆಯಾಗಿವೆ.
ಯಾವ್ಯಾವ ಪದಗಳು?: ಹಿಟ್ಲರ್, ಮದರ್ ತೆರೇಸಾ, ಶಾರುಖ್, ಇಂದಿರಾ ಗಾಂಧಿ ಅಲ್ಲದೆ, ನಾಜಾಯಝ್ ಔಲಾದ್, ಧೋಕಾ, ಧೋಖೇಬಾಝ್ ಪ್ರಧಾನಮಂತ್ರಿ, ನಂಗೇ, ದಲಾಲ್, ಜೂಟ್ ಔರ್ ಫರೇಬ್ ದೇಖೇಹೆ, ಜೂಟಾ, ಛೋರ್, ತೈ ತೈ ಪೀಸ್, ಜೋಕ ರೋನ್ ಇತ್ಯಾದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com