
ನವದೆಹಲಿ: ಕೇಂದ್ರ ಸರ್ಕಾರ ಮತ್ತೆ ಎನ್ ಜಿಒಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಮಂಗಳವಾರ ಬರೋಬ್ಬರಿ 4,470 ಎನ್ ಜಿಒಗಳ ನೋಂದಣಿಯನ್ನು ರದ್ದು ಮಾಡಿ
ಸರ್ಕಾರ ಆದೇಶ ಹೊರಡಿಸಿದೆ. ವಿದೇಶಿ ಕೊಡುಗೆ ನಿಬಂಧನೆ ಕಾಯ್ದೆ(ಎಫ್ ಸಿಆರ್ ಎ)ಯನ್ವಯ ವಾರ್ಷಿಕ ವಿವರ ಒದಗಿಸದ ಸಂಸ್ಥೆಗಳ ವಿರುದ್ಧ ಈ ಕ್ರಮ ಕೈಗೊಂಡಿರು
ವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಎಫ್ ಸಿಆರ್‍ಎ ಲೈಸೆನ್ಸ್ ರದ್ದಾದ ಸಂಸ್ಥೆಗಳ ಪೈಕಿ ಪಂಜಾಬ್ ವಿಶ್ವವಿದ್ಯಾಲಯ, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ದೆಹಲಿಯ ಗಾರ್ಗಿ ಕಾಲೇಜು, ಲೇಡಿ ಇರ್ವಿನ್ ಕಾಲೇಜು, ವಿಕ್ರಂ ಸಾರಾಭಾಯ್ ಫೌಂಡೇಷನ್ ಮತ್ತು ದೆಹಲಿ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಅವರ
ಕಬೀರ್ ಎನ್‍ಜಿಒ ಕೂಡ ಸೇರಿದೆ. ಜತೆಗೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಎಸ್ಕಾರ್ಟ್ಸ್ ಹಾರ್ಟ್ ಇನ್‍ಸ್ಟಿಟ್ಯೂಟ್ ಗೂ ರದ್ದು ಬಿಸಿ ತಟ್ಟಿದೆ.
Advertisement