
ನವದೆಹಲಿ: ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ಏರ್‍ಇಂಡಿಯಾವು ಮಳೆಗಾಲದ ಭರ್ಜರಿ ಕೊಡುಗೆ ನೀಡಿದೆ. ಕೇವಲ ಕು 1,777(ಎಲ್ಲ ಶುಲ್ಕಗಳನ್ನೂ ಒಳಗೊಂಡಂತೆ)ಕ್ಕೆ ದೇಶೀಯ ಸಂಚಾರದ ಟಿಕೆಟ್ ಒದಗಿಸುವುದಾಗಿ ಏರ್‍ಇಂಡಿಯಾ ಘೋಷಿಸಿದೆ. ಜೂ.10 ಮತ್ತು 12ರಂದು ರಿಯಾಯಿತಿ ಟಿಕೆಟ್ ಕಾಯ್ದಿರಿಸ ಬಹುದು. ಆನ್‍ಲೈನ್, ಏರ್‍ಇಂಡಿಯಾ ವೆಬ್‍ಸೈಟ್, ಸಂಸ್ಥೆಯ ಟೋಲ್ ಫ್ರೀ ಸಂಖ್ಯೆ, ಅಧಿಕೃತ ಏಜೆಂಟ್‍ಗಳ ಮೂಲಕ ಬುಕ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಈ ಟಿಕೆಟ್ ಮೂಲಕ ಜು.1ರಿಂದ ಸೆ.30ರೊಳಗೆ ಪ್ರಯಾಣಿಸಲು ಅವಕಾಶವಿದೆ.
Advertisement