
ಲಂಡನ್ : ಕಟ್ಟರ್ ಸಂಪ್ರದಾಯವಾದಿ ದೇಶವಾದ ಐರ್ಲೆಂಡ್‍ನಲ್ಲಿ ಗರ್ಭಪಾತಕ್ಕೆ ಸಂಬಂಧಿಸಿ ಜಾರಿಯಲ್ಲಿರುವ ಕಠಿಣ ನಿಯಮಾವಳಿಗಳ ಸಡಿಲಿಕೆಗಾಗಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಘಟನೆ ಅಂತಾ ರಾಷ್ಟ್ರೀಯ ಆಂದೋಲನ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಕರ್ನಾಟಕದವರೇ ಆದ ಸವಿತಾ ಹಾಲಪ್ಪನವರ್ ಸಾವಿನ ನಂತರ ಐರ್ಲ್ಯಾಂಡ್ನ ಗರ್ಭಪಾತ ಕಾನೂನು ಅಂತಾರಾಷ್ಟ್ರೀಯ ಟೀಕೆಗೆ ಗುರಿಯಾಗಿತ್ತು. ಈ ಸಂಬಂಧ ಜನಾಂದಲೋನವೂ ಆರಂಭವಾಗಿತ್ತು. . ಅದರ ಭಾಗವಾಗಿ ಅಮ್ನೆಸ್ಟಿ ಈ ಹೋರಾಟ ರೂಪಿಸುತ್ತಿದೆ. ಗರ್ಭಿಣಿಯರು, ಹೆಣ್ಣುಮಕ್ಕಳು ಐರ್ಲೆಂಡ್‍ನಲ್ಲಿದ್ದರೆ ಅವರ ಆರೋಗ್ಯ, ಜೀವ ಪಣಕ್ಕೊಡ್ಡಿದ್ದಾರೆಂದೇ ಅರ್ಥ ಎಂದು ``ಅವಳು ಕ್ರಿಮಿನಲ್ ಅಲ್ಲ; ಐರ್ಲೆಂಡ್‍ನ ಗರ್ಭಪಾತ ಕಾನೂನು ಪರಿಣಾಮ'' ಎನ್ನುವ ವರದಿಯಲ್ಲಿ ಸಂಸ್ಥೆ ಹೇಳಿದೆ.
Advertisement