
ಇಸ್ಲಾಮಾಬಾದ್: ಭಯೋತ್ಪಾದನೆಗೆ ಸಂಬಂಧಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಢಾಕಾದಲ್ಲಿ ಮಾಡಿದ ಭಾಷಣಕ್ಕೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೋದಿ ಹೇಳಿಕೆಯು ನೆರೆಯ ದೇಶಗಳ ಕುರಿತು ಭಾರತ ಯಾವ ರೀತಿಯ ಮನೋಭಾವ ಹೊಂದಿದೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ ಎಂದುಪಾಕಿಸ್ತಾನದ ವಿದೇಶಾಂಗ ಸಚಿವಾಲಯ ವಕ್ತಾರ ಖ್ವಾಜಿ ಖಲೀಲುಲ್ಲಾ ಹೇಳಿದ್ದಾರೆ. ಪಾಕಿಸ್ತಾನವು ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಬಯಸುತ್ತದೆ.ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮೋದಿ ಅವರು ಕಿರುಕುಳ ಎಂದು ಕರೆದದ್ದು ದುರದೃಷ್ಟಕರ ಎಂದು ಖ್ವಾಜಿ ಹೇಳಿದ್ದಾರೆ.
Advertisement