
ಹೈದರಾಬಾದ್: ಮತಕ್ಕಾಗಿ ಲಂಚ ಆಮೀಷ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ತೆಲುಗು ದೇಶಂ ಪಕ್ಷ(ಟಿಡಿಪಿ) ಶಾಸಕ ಎ. ರೇವಂತ್ ರೆಡ್ಡಿ ಅವರಿಗೆ 12 ಗಂಟೆ ಅವಧಿಗೆ ಜಾಮೀನು ಸಿಕ್ಕಿದೆ.
ತಮ್ಮ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಜಾಮೀನು ನೀಡುವಂತೆ ರೇವಂತ್ ರೆಡ್ಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪರ್ಧಿಸಿದ ಸ್ಥಳೀಯ ನ್ಯಾಯಾಲಯದ 12 ಗಂಟೆಗಳ ಅವಧಿಗೆ ಜಾಮೀನು ನೀಡಿದೆ ಈ ಆದೇಶದನ್ವಯ ಗುರುವಾರ ಬೆಳಿಗ್ಗೆ 6 ಗಂಟೆಗೆ ಚೆರ್ಲಪಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಭ್ರಷ್ಟಾಚಾರದ ವಿರೋಧಿ ದಳದ ಬೆಂಗಾವಲು ಪಡೆಯ ರಕ್ಷಣೆಯಲ್ಲಿ ರೆಡ್ಡಿ ಅವರನ್ನು ಜುಬ್ಲಿ ಹಿಲ್ಸ್ ನಿವಾಸಕ್ಕೆ ಹಾಗೂ ಅಲ್ಲಿಂದ ಮಧಾಪುರನಲ್ಲಿರುವ ಸಭಾಂಗಣಕ್ಕೆ ಕೊರೆದೊಯ್ಯಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಶುರುವಾಗಿದೆ.
ಎಸಿಬಿ ವಿಶೇಷ ನ್ಯಾಯಾಲಯವು ರೆಡ್ಡಿ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, ಪ್ರಕರಣದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡದಂತೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಸಿಬ್ಬಂದಿ ಟಿಡಿಪಿ ನಾಯಕನ ಮೇಲೆ ಹದ್ದಿನ ಕಣ್ಣಿಟ್ಟಿದೆ.
Advertisement