ನಕಲಿ ಪದವಿ ಪ್ರಕರಣ: ತೋಮರ್ ಜಾಮೀನು ಅರ್ಜಿ ವಿಚಾರಣೆ ಜೂ.16ಕ್ಕೆ ಮುಂದೂಡಿಕೆ

ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಸಾಕೇತ್ ಕೋರ್ಟ್ ಜೂನ್ 16ಕ್ಕೆ ಮುಂದೂಡಿದೆ...
ಜಿತೇಂದ್ರ ಸಿಂಗ್ ತೋಮರ್
ಜಿತೇಂದ್ರ ಸಿಂಗ್ ತೋಮರ್

ನವದೆಹಲಿ: ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಸಾಕೇತ್ ಕೋರ್ಟ್ ಜೂನ್ 16ಕ್ಕೆ ಮುಂದೂಡಿದೆ.

ನಕಲಿ ಪದವಿ ಪ್ರಮಾಣ ಪತ್ರ ಪಡೆದ ಪ್ರಕರಣ ಸಂಬಂಧ ದೆಹಲಿ ಪೊಲೀಸರ ವಶದಲ್ಲಿರುವ ಆಮ್ ಆದ್ಮಿ ಪಕ್ಷದ ಶಾಸಕ ತೋಮರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂಜೀವ್ ಜೈನ್‌ ಅವರು, ಪ್ರಕರಣದ ತನಿಖಾಧಿಕಾರಿ ದೆಹಲಿಯಿಂದ ಹೊರಗಿರುವುದು ಹಾಗೂ ತನಿಖೆಯ ಪ್ರಗತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲದಿರುವುದರಿಂದ ವಿಚಾರಣೆಯನ್ನು ಮುಂದೂಡಿದ್ದಾರೆ.

ಕಾನೂನು ಬಾಹಿರವಾಗಿ ಬಿಎಸ್ಸಿ ಪದವಿ ಪಡೆದ ಆರೋಪದ ಹಿನ್ನೆಲೆಯಲ್ಲಿ ತೋಮರ್ ಅವರನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದು, ಜೂನ್ 13ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com