ಸನ್ ಡಿಟಿಹೆಚ್ ನಿರ್ದೇಶಕರಿಗೆ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿ

ಕೇಂದ್ರ ಗೃಹ ಸಚಿವಾಲಯ ಸನ್ ಡಿ.ಟಿ.ಹೆಚ್ ನ ನಿರ್ದೇಶಕರಿಗೆ ಭದ್ರತಾ ಅನುಮತಿ ನೀಡಿದೆ.
ಸನ್ ಡಿ.ಟಿ.ಹೆಚ್(ಸಾಂದರ್ಭಿಕ ಚಿತ್ರ)
ಸನ್ ಡಿ.ಟಿ.ಹೆಚ್(ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಸನ್ ಡಿ.ಟಿ.ಹೆಚ್ ನ ನಿರ್ದೇಶಕರಿಗೆ ಭದ್ರತಾ ಅನುಮತಿ ನೀಡಿದೆ. ಈ ಭದ್ರತಾ ಅನುಮತಿ, ದಯಾನಿಧಿ ಮಾರನ್ ಕುಟುಂಬ ಒಡೆತನದ ಕಂಪನಿಗೆ ನೀಡಿರುವ ಅನುಮತಿ ಅಲ್ಲ  ಎಂದು  ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.   

ಸನ್ ಡಿ.ಟಿ.ಹೆಚ್  ನ  ನೂತನ  ನಿರ್ದೇಶಕರಿಗೆ ಭದ್ರತಾ ಅನುಮತಿ ನೀಡುವಂತೆ  ಕೆಂದ್ರ ಗೃಹ ಸಚಿವಾಲಯಕ್ಕೆ ಕಡತ  ಕಳಿಸಲಾಗಿತ್ತು,  ಪರಿಶೀಲನೆ ನಡೆಸಿದ ಬಳಿಕ ಅನುಮತಿ ನೀಡಲಾಗಿದೆ. ಕೆಂದ್ರ ಗೃಹ ಸಚಿವಾಲಯ ಈ ಹಿಂದೆ ಮಾರನ್ ಒಡೆತನದ 40 ಎಫ್.ಎಂ ರೇಡಿಯೋ ಸ್ಟೇಷನ್ ಹಾಗೂ ಸನ್ ನೆಟ್ವರ್ಕ್ ಸಮೂಹದ 33 ಟಿ.ವಿ ಚಾನೆಲ್ ಗಳಿಗೆ  ಭದ್ರತಾ ಅನುಮತಿ ನೀಡಲು ನಿರಾಕರಿಸಿತ್ತು.

ಡಿಟಿಹೆಚ್  ನ ನೂತನ ನಿರ್ದೇಶಕರ ಭದ್ರತಾ ಅನುಮತಿ ಪ್ರತ್ಯೇಕ ಪ್ರಕರಣವಾಗಿದ್ದು, ಯಾವುದೇ ಲೋಪದೋಷಗಳು ಇಲ್ಲದ ಹಿನ್ನೆಲೆಯಲ್ಲಿ ಭದ್ರತಾ ಅನುಮತಿ ದೊರೆತಿದೆ. ಆದರೆ ಇದನ್ನೇ ಸನ್ ಡಿಟಿಹೆಚ್ ಗೆ ನೀಡಲಾಗಿರುವ ಅನುಮತಿ ಎಂದು ಭಾವಿಸಬಾರದು, ಡಿಟಿಹೆಚ್ ಕಂಪನಿ ವಿಷಯ ಪ್ರಸ್ತಾಪವಾದಾಗ ಅದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಚಾನೆಲ್ ನಲ್ಲಿ ದೇಶ ವಿರೋಧಿ ಅಂಷಗಳು ಪ್ರಕಟವಾಗುತ್ತಿದ್ದರೆ ಮಾತ್ರ ಭದ್ರತಾ ಅನುಮತಿಯನ್ನು ನಿರಾಕರಿಸಬೇಕೇ ಹೊರತು ಮಾಲೀಕರ ಅಪರಾಧಗಳನ್ನು ಪರಿಗಣಿಸಿ ಅಲ್ಲ ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಗೃಹ ಇಲಾಖೆ, ಹಾಗಾದರೆ ಈ ನಿಯಮ ದಾವೂದ್ ಇಬ್ರಾಹಿಂ ಗೂ ಸಹ ಕುಟುಂಬ ಒಡೆತನದ ಚಾನೆಲ್ ಪ್ರಾರಂಭಿಸಲು ಅವಕಾಶ ನೀಡಲಿದೆ ಎಂದು ಹೇಳಿದೆ.    

ಹಣದುರುಪಯೋಗ ಪಡಿಸಿಕೊಂಡಿರುವುದು ಸಹ ರಾಷ್ಟ್ರವಿರೋಧಿ ಕೆಲಸವಾಗಿದ್ದು ಅಂತಹ ಮಾಲಿಕರ ಸಂಸ್ಥೆಗಳಿಗೆ ಭದ್ರತಾ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೆಂದ್ರ  ಗೃಹ ಇಲಾಖೆ ಸ್ಪಷ್ಟಪಡಿಸಿದೆ.  ಸನ್ ನೆಟ್‍ವರ್ಕ್ ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಮೂಹವಾಗಿದ್ದು, 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿದೆ. ಕಳೆದ ವರ್ಷ 33 ಚಾನೆಲ್‍ಗಳಿಗೆ 10 ವರ್ಷಗಳ ಭದ್ರತಾ ಪರವಾನಗಿ ನವೀಕರಣ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com