
ನವದೆಹಲಿ: ವಾಜಪೇಯಿ ನೇತೃತ್ವದ ವಾಜಪೇಯಿ ಸರ್ಕಾರ 1995ರಲ್ಲಿ ಒಂದು ಮತದ ಅಂತರದಲ್ಲಿ ಸೋಲಲು ಕಾರಣ ರಾಗಿದ್ದ ಒಡಿಶಾದ ಮಾಜಿ ಸಿಎಂ ಗಿರಿಧರ್ ಗಮಾಂಗ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಗಮಾಂಗ್ ಮೇ 30 ರಂದು ಕಾಂಗ್ರೆಸ್‍ಗೆ ರಾಜಿ ನಾಮೆ ನೀಡಿದ್ದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಶುಕ್ರವಾರ ಭೇಟಿ ಯಾದ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ. ಏ.17, 1999ರಂದು ವಾಜಪೇಯಿ ನೇತೃ ತ್ವದ ಸರ್ಕಾರ ವಿರುದ್ಧ ನಡೆದ ಅವಿಶ್ವಾಸಮತ ನಿರ್ಣಯ ವೇಳೆ ಪ್ರತಿಪಕ್ಷಗಳ ಪರವಾಗಿ ಮತ ಹಾಕಿದ್ದರು. ಇದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಅವರು ಒಡಿಶಾದ ಮುಖ್ಯಮಂತ್ರಿಯಾಗಿದ್ದರು. 9 ಬಾರಿ ಕಾಂಗ್ರೆಸ್‍ನಿಂದ ಲೋಕಸಭೆ ಯನ್ನು ಪ್ರತಿನಿಧಿಸಿದ್ದರು.
Advertisement