ಭಾರತೀಯ ಸೇನೆ
ಭಾರತೀಯ ಸೇನೆ

ಮೃತರು 100 ಅಲ್ಲ, 7!

ಮ್ಯಾನ್ಮಾರ್‍ನಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆ ಎಲ್ಲರೂ ಅಂದುಕೊಂಡಷ್ಟು ಯಶಸ್ವಿಯಾಗಿಲ್ಲ. ಕಾರ್ಯಾಚರಣೆಯಲ್ಲಿ ಸತ್ತ...

ನವದೆಹಲಿ: ಮ್ಯಾನ್ಮಾರ್‍ನಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆ ಎಲ್ಲರೂ ಅಂದುಕೊಂಡಷ್ಟು ಯಶಸ್ವಿಯಾಗಿಲ್ಲ. ಕಾರ್ಯಾಚರಣೆಯಲ್ಲಿ ಸತ್ತ ಬಂಡುಕೋರರು 100 ಮಂದಿ ಅಲ್ಲ, ಕೇವಲ 7. ಗಾಯಗೊಂಡವರು 12ಕ್ಕೂ ಕಡಿಮೆ ಉಗ್ರರು!
ಇಂತಹುದೊಂದು ವಿಚಾರ ಶನಿವಾರ ಬೆಳಕಿಗೆ ಬಂದಿದೆ. ಸೇನೆಯು ನಡೆಸಿದ ಕಾರ್ಯಾಚರಣೆಯ ಫಲಿತಾಂಶವು ಈ ಹಿಂದೆ ಅಂದಾಜಿಸಿದ್ದಕ್ಕಿಂತ ತುಂಬಾ ಕಡಿಮೆ. ಒನ್ಝಿಯಾದ ಒಂದು ಕ್ಯಾಂಪ್ ಮತ್ತು ಫೋನ್ಯೋದ ಎರಡು ಕ್ಯಾಂಪ್‍ಗಳ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ 40 ಮಂದಿ ಬಂಡುಕೋರರು ಸ್ಥಳದಿಂದ ಪರಾರಿಯಾಗಿದ್ದರು. ಹೀಗಾಗಿ ಸೇನೆಯ ಕಾರ್ಯಾಚರಣೆ
ಸಂಪೂರ್ಣ ಯಶಸ್ವಿಯಾಗಲಿಲ್ಲ. ಕೇವಲ 7 ಮಂದಿ ಉಗ್ರರ ಮೃತದೇಹಗಳಷ್ಟೇ ಸಿಕ್ಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತೀಕಾರದ ಕಾರ್ಯಾಚರಣೆಯಲ್ಲವೇ?: ಗುಪ್ತಚರ ಪಡೆಗಳ ಜತೆಗೂಡಿ ಸೇನೆಯು ನಡೆಸಿದ ಮೌಲ್ಯಮಾಪನದಲ್ಲಿ ಈವರೆಗೆ ಕೇವಲ 7 ಮೃತದೇಹಗಳಷ್ಟೇ ಸಿಕ್ಕಿರುವ ವಿಚಾರ ಹಾಗೂ 12ಕ್ಕೂ ಕಡಿಮೆ ಮಂದಿಯಷ್ಟೇ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ದಾಳಿಗೆ ತುತ್ತಾದ ಉಗ್ರ ಕ್ಯಾಂಪ್‍ಗಳು ಮಣಿಪುರದಲ್ಲಿ 18 ಯೋಧರ ಸಾವಿಗೆ ಕಾರಣವಾದ ಬಂಡುಕೋರರದ್ದಲ್ಲ ಎಂಬ ವಿಚಾರವೂ ತಿಳಿದುಬಂದಿದೆ. ಹೀಗಾಗಿ ಮ್ಯಾನ್ಮಾರ್  ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ``ಮಣಿಪುರ ದಾಳಿಯ ಹೊಣೆಹೊತ್ತ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್  ನಾಗಾಲಿಂ-ಖಪ್ಲಾಂಗ್ ಸಂಘಟನೆ ಅಥವಾ ಕಾಂಗ್ಲೆ ಯಾವೋಲ್ ಕನ್ನಾ ಲಪ್ ಸಂಘಟನೆಗೂ ನಾವು ದಾಳಿ ನಡೆಸಿದ ಒನ್ಝಿಯಾ ಕ್ಯಾಂಪ್‍ಗೂ ಸಂಬಂಧವಿಲ್ಲ. ಈ ಕಾರ್ಯಾಚರಣೆಯನ್ನು ಪ್ರತೀಕಾರದ ಉದ್ದೇಶದಿಂದ ನಡೆಸಿದ್ದೇ ಅಲ್ಲ'' ಎಂದು ಇಬ್ಬರು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ. ರಾಥೋಡ್ ಹೇಳಿಕೆ ಬಗ್ಗೆ ಸರ್ಕಾರದಲ್ಲೇ ಅಪಸ್ವರ: ``ಭಾರತೀಯ ಸೇನೆಯು ಗುಪ್ತ ದಾಳಿ ನಡೆಸಲು ಮ್ಯಾನ್ಮಾರ್ ಅನ್ನು ಪ್ರವೇಶಿಸಿತ್ತು'' ಎಂಬ ಸಚಿವ ರಾಜ್ಯವರ್ಧನ್ ರಾಥೋಡ್ ಹೇಳಿಕೆಗೆ ಸರ್ಕಾರದಲ್ಲೇ ಅಪಸ್ವರ ಕೇಳಿಬಂದಿದೆ. ಕೇಂದ್ರದ ಕನಿಷ್ಠ ಇಬ್ಬರು ಸಚಿವರು, ``ರಾಥೋಡ್ ಅವರು ಇಂತಹ ಹೇಳಿಕೆ ನೀಡಬಾರದಿತ್ತು'' ಎಂದು ಅಭಿಪ್ರಾಯಪಟ್ಟಿದ್ದಾರೆ. ಎಕನಾಮಿಕ್ ಟೈಮ್ಸ್ ಜತೆ ಮಾತನಾಡಿದ ಇಬ್ಬರು ಸಚಿವರು, ``ಸೇನಾ ಕಾರ್ಯಾಚರಣೆಯು ತಮ್ಮ ನೆಲದಲ್ಲಿ ನಡೆದೇ ಇಲ್ಲ ಎಂಬ ಮ್ಯಾನ್ಮಾರ್ ಹೇಳಿಕೆಯ ಹಿಂದಿನ ಧ್ವನಿ ನಮಗೆ ಅರ್ಥವಾಗುತ್ತದೆ. ಅಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನ್ಮಾರ್ ಅಂತಹ ಹೇಳಿಕೆ ನೀಡಲೇಬೇಕಿತ್ತು. ಇದುಗೊತ್ತಿದ್ದೂ ರಾಥೋಡ್ ಅಂತಹ ಹೇಳಿಕೆ ನೀಡುವ ಅಗತ್ಯವಿರಲಿಲ್ಲ'' ಎಂದು ಹೇಳಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜೂ.17ರಂದು ಮ್ಯಾನ್ಮಾರ್‍ಗೆ ಭೇಟಿ ನೀಡಲಿದ್ದು, ಅಲ್ಲಿನ ಅಧ್ಯಕ್ಷ ಸೇರಿದಂತೆ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅತಿರೇಕದ ಪ್ರಚಾರದಿಂದ ಕಾರ್ಯಾಚರಣೆಗೆ ಧಕ್ಕೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮ್ಯಾನ್ಮಾರ್ ಕಾರ್ಯಾಚರಣೆ ಬಗ್ಗೆ ಸಚಿವರು ನೀಡುತ್ತಿರುವ ಹೇಳಿಕೆಗಳು ಹಾಗೂ ಅತಿಯಾದ ಎದೆತಟ್ಟುವಿಕೆಯನ್ನು ಸ್ವತಃ ಸೇನಾ ಸಮುದಾಯವೇ ಟೀಕಿಸಿತೊಡಗಿದೆ. ``ಮ್ಯಾನ್ಮಾರ್ ಕಾರ್ಯಾಚರಣೆ ಶ್ಲಾಘನೀಯ ನಿಜ. ಆದರೆ ಈ ಹಿಂದೆಯೂ ಇಂಥ ಕಾರ್ಯಾಚರಣೆಗಳು ನಡೆದಿವೆ. ಆದರೆ, ಇದರ ವೈಭವೀಕರಣವು ಸೇನೆಯ ಭವಿಷ್ಯದ ಕಾರ್ಯಾಚರಣೆಗಳಿಗೆ ಧಕ್ಕೆ ಉಂಟುಮಾಡಲಿವೆ'' ಎಂದು ಸೇನೆಯ ಹಲವು ನಿವೃತ್ತ ಅಧಿಕಾರಿಗಳು, ಹಾಲಿ ಜನರಲ್‍ಗಳು, ಯುದ್ಧ ಕಾರ್ಯತಂತ್ರ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ``ಕಾರ್ಯಾಚರ ಣೆಯ ಬಗ್ಗೆ ಕೆಲವು ಸಂಗತಿಗಳನ್ನಷ್ಟೇ ಬಹಿರಂಗಪಡಿ ಸಬೇಕು. ದಾಳಿಯ ಯೋಜನೆ ಮತ್ತು ಅನುಷ್ಠಾನದ ಮಾನದಂಡಗಳನ್ನು ಹೊರಗೆ ಚರ್ಚಿಸಲೇಬಾರದು. ಆದರೆ ಪ್ರಚಾರಪ್ರಿಯ ಅಧಿಕಾರಿಗಳು ಎಲ್ಲವನ್ನೂ ಹೇಳಿಕೊಳ್ಳುತ್ತಾ ಸಾಗಿದ್ದಾರೆ. ಇದು ಸರಿಯಲ್ಲ'' ಎಂಬ ಅಬಿsಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com