
ನವದೆಹಲಿ: ಸನ್ ನೆಟ್‍ವರ್ಕ್‍ನ 33 ಸುದ್ದಿವಾಹಿನಿಗಳ ಪರವಾನಗಿ ರದ್ದು ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮಾರನ್ ಸಹೋದರರು ಪ್ರತಿತಂತ್ರ ಹಣೆದಿದ್ದಾರೆ. ದೇಶಾದ್ಯಂತ ಹಲವು ಮಾಧ್ಯಮ ಸಂಸ್ಥೆಗಳ ಮೇಲೂ ಅನೇಕ ಕ್ರಿಮಿನಲ್ ಆರೋಪಗಳಿವೆ.
ಇಂಥ ಪರಿಸ್ಥಿತಿಯಲ್ಲಿ ನಮ್ಮ ವಿರುದ್ಧ ಮಾತ್ರ ಯಾಕೆ ಕಠಿಣ ನಿಲುವು ಪ್ರದರ್ಶಿಸುತ್ತಿದ್ದೀರಿ ಎಂದು ಸನ್ ಗ್ರೂಪ್‍ನ ಸಿಇಒ ಕೇಂದ್ರ ಗೃಹ ಕಾರ್ಯದರ್ಶಿ ಎಲ್.ಸಿ. ಗೋಯಲ್
ಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಸನ್‍ನೆಟ್‍ವರ್ಕ್ ನ ಸಿಇಒ ಷಣ್ಮುಗಂ ಬರೆದ ಪತ್ರದಲ್ಲಿ ಮಾಧ್ಯಮ ಸಂಸ್ಥೆಗಳು, ನಿರ್ದೇಶಕರು, ಪ್ರವರ್ತಕರು ಹಾಗೂ ಷೇರುದಾರರ ಮೇಲೂ
ಅನೇಕ ಆರ್ಥಿ ಅಪರಾಧಗಳ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕೆಲವು ಸಂಸ್ಥೆಗಳ ವಿರುದ್ಧ ತನಿಖೆಯೂ ನಡೆಯುವುದು ಬಾಕಿ ಇದೆ
ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಸಂಬಂಧ ಅವರು ಈ ರೀತಿಯ ತನಿಖೆ ಎದುರಿಸುತ್ತಿರುವ ಮಾಧ್ಯಮದ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ ಎಂದು ನ್ಯೂಸ್ ಮಿನಿಟ್ಸ್ ವರದಿ ಮಾಡಿದೆ. ಪಟ್ಟು ಸಡಿಲಿಸಿದ ಕೇಂದ್ರ: ಸನ್ ಗ್ರೂಪ್‍ನ 33ವಾಹಿನಿಗಳ ಲೈಸನ್ಸ್ ರದ್ದು ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವ ಸುಳಿವನ್ನು ಕೇಂದ್ರ ಸರ್ಕಾರ ಶುಕ್ರವಾರ ನೀಡಿದೆ.
ಸನ್‍ಟೀವಿ ಪ್ರವರ್ತಕರಾದ ಮಾರನ್ ಸಹೋದರರ ಮೇಲಿರುವ ಪ್ರಕರಣಗಳು ದೇಶದ ಆರ್ಥಿಕ ಭದ್ರತೆ ಜತೆ ರಾಜಿ ಮಾಡಿಕೊಳ್ಳುವಂತಿಲ್ಲ ಎನ್ನುವ ಅಭಿಪ್ರಾಯ ಕಾನೂನು ತಜ್ಞರಿಂದ ವ್ಯಕ್ತವಾದರೆ ಪರವಾನಗಿ ರದ್ದು ಮಾಡುವ ನಿರ್ಧಾರ ಪುನರ್ ಪರಿಶೀಲಿಸುವುದಾಗಿ ಗೃಹ ಸಚಿವಾಲಯ ಹೇಳಿದೆ.
Advertisement