ಭಾರತ ವಿರೋಧಿ ವಿಚಾರ ಸಂಕಿರಣ: ಗಿಲಾನಿಗೆ ಗೃಹ ಬಂಧನ

ಭಾರತದ ವಿರೋಧಿ ವಿಚಾರ ಸಂಕಿರಣ ಸಿದ್ಧತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಭಾರತ ಸರ್ಕಾರವು ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಗೆ ಶನಿವಾರ ಗೃಹ ಬಂಧನ ವಿಧಿಸಿದೆ...
ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ
ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ

ಶ್ರೀನಗರ: ಭಾರತದ ವಿರೋಧಿ ವಿಚಾರ ಸಂಕಿರಣ ಸಿದ್ಧತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಭಾರತ ಸರ್ಕಾರವು ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಗೆ ಶನಿವಾರ ಗೃಹ ಬಂಧನ ವಿಧಿಸಿದೆ.

ಮೂಲಗಳ ಪ್ರಕಾರ ಜೂನ್. 14 ರಂದು ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತ ಸಮುದಾಯದ ಮುಖಂಡರು, ಸಿಖ್ ಸಮುದಾಯದ ಅಕಾಲಿ ದಳ ಮುಖಂಡ ಸಿಮ್ರಂಜಿತ್ ಮನ್ ಹಾಗೂ ಕ್ರೈಸ್ತ ಸಮುದಾಯದ ಮುಂಖಡರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ವಿಚಾರ ಸಂಕಿರಣದಲ್ಲಿ ಧರ್ಮಾಂಧ ಹಿಂದುತ್ವದ ಅಜೆಂಡಾ ಮೂಲಕ ಕಾಶ್ಮೀರವನ್ನು ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಪ್ರತಿಭಟಿಸಲು ಹುರಿಯತ್  ಕಾನ್ಫರೆನ್ಸ್ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿತ್ತು.

ಗಿಲಾನಿ ಭಾರತ ವಿರೋಧಿ ವಿಚಾರ ಸಂಕಿರಣದಿಂದ ಕೋಮುಗಲಭೆ ಉಂಟಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರವು ಮುಂಜಾಗ್ರತೆ ಕ್ರಮವಾಗಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಗೃಹ ಬಂಧನದಲ್ಲಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com