ಪ್ಯಾಕ್ಡ್ ಫುಡ್‍ಗಳಿಗೆ ಪರೀಕ್ಷಾ ಸಮಯ!

ಮ್ಯಾಗಿ ಆಯಿತು, ಇದೀಗ ಇತರ ಪ್ಯಾಕ್ಡ್ ಫುಡ್ ಕಂಪನಿಗಳಿಗೆ ನಡುಕ ಪ್ರಾರಂಭವಾಗಿದೆ. ಕಾರಣ, ಈಗ ದೇಶಾದ್ಯಂತ ಮಾರುಕಟ್ಟೆಯಲ್ಲಿ ದೊರೆಯುವ...
ಪ್ಯಾಕ್ಡ್ ಆಹಾರೋತ್ಪನ್ನ (ಸಾಂದರ್ಭಿಕ ಚಿತ್ರ)
ಪ್ಯಾಕ್ಡ್ ಆಹಾರೋತ್ಪನ್ನ (ಸಾಂದರ್ಭಿಕ ಚಿತ್ರ)

ನವದೆಹಲಿ: ಮ್ಯಾಗಿ ಆಯಿತು, ಇದೀಗ ಇತರ ಪ್ಯಾಕ್ಡ್ ಫುಡ್ ಕಂಪನಿಗಳಿಗೆ ನಡುಕ ಪ್ರಾರಂಭವಾಗಿದೆ. ಕಾರಣ, ಈಗ ದೇಶಾದ್ಯಂತ  ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಪ್ಯಾಕ್ಡ್
ಆಹಾರೋತ್ಪನ್ನಗಳನ್ನು ಪರೀಕ್ಷೆಗೊಳಪಡಿಸಬೇಕು ಎಂದು ಎಲ್ಲ ರಾಜ್ಯಗಳ ಆಹಾರ ಇಲಾಖೆ ಆಯುಕ್ತರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ (ಎಫ್ ಎಸ್‍ಎಸ್ ಎಐ) ಆದೇಶಿಸಿದೆ. ಇದಲ್ಲದೆ ದೇಶಾದ್ಯಂತ ಅಕ್ರಮ ಪ್ಯಾಕ್ಡ್ ಉತ್ಪನ್ನಗಳೂ ಮಾರಾಟವಾಗುತ್ತಿದ್ದು, ಎಫ್ ಎಸ್‍ಎಸ್‍ಎಐ ದಲ್ಲಿ ನೋಂದಣಿ ಮಾಡಿಸಿಕೊಳ್ಳದ ನೂರಾರು ಆಹಾರೋತ್ಪನ್ನಗಳಿದ್ದು, ಅವುಗ ಳನ್ನು ಪತ್ತೆಹಚ್ಚಿ, ಗುಣಮಟ್ಟವನ್ನುಮೌಲ್ಯಮಾಪನ ಮಾಡ ಬೇಕು ಎಂದು ಆದೇಶದಲ್ಲಿ ತಿಳಿಸಿದ್ದು, ಮ್ಯಾಗಿ ನಿಷೇಧ ಹಿನ್ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾ ಗುತ್ತಿದೆ ಎಂದು ಹೇಳಲಾಗಿದೆ. ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಎಲ್ಲ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರ ಜತೆ ಸಭೆ ನಡೆಸಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ,ಕೂಡಲೇ ಅಕ್ರಮ ಉತ್ಪನ್ನಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಸೂಚನೆ ಯನ್ನೂ ರವಾನಿಸಲಾಗಿದೆ. ಇದಲ್ಲದೆ, ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರು ಒಂದು ವರ್ಷದಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪಟ್ಟಿಯನ್ನು ಸಿದ್ಧಪಡಿಸಬೇಕು ಜತೆಗೆ ಎಲ್ಲ ಪ್ಯಾಕ್ಡ್ ಉತ್ಪನ್ನಗಳ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷೆಗೊ ಳಪಡಿಸಬೇಕು.ಅಲ್ಲದೆ, ಎಫ್ ಎಸ್‍ಎಸ್‍ಎಐದಲ್ಲಿ ನೋಂದಣಿ ಯಾಗದ ಆಹಾರೋತ್ಪನ್ನಗಳನ್ನೂ ಪತ್ತೆಹಚ್ಚ
ಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಕ್ರಮ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಅಗತ್ಯ ವಾಗಿ ಕೈಗೊಳ್ಳಬಹುದು ಎಂದೂ ಅನುಮತಿ ನೀಡಿರುವ ಎಫ್ ಎಸ್‍ಎಸ್‍ಎಐ, 2015, ಏ. 30ರಂದು ಪರೀಕ್ಷೆಗೊಳಪಡಿಸಿ ತಿರಸ್ಕೃತ ಉತ್ಪನ್ನ ಗಳ 500 ಆಹಾರೋತ್ಪನ್ನದ ಪಟ್ಟಿಯನ್ನೂ ರಾಜ್ಯ ಸುರಕ್ಷತಾ ಆಯುಕ್ತರಿಗೆ ನೀಡಿದೆ.

ಅಸುರಕ್ಷತೆಯಲ್ಲಿ ಭಾರತಕ್ಕೆ ನಂ. 1 ಸ್ಥಾನ: 2011ರಿಂದ ಈವರೆಗೆ ಸುಮಾರು 2.4 ಲಕ್ಷ ಪ್ಯಾಕ್ಡ್ ಫುಡ್ ಸ್ಯಾಂಪಲ್‍ಗಳನ್ನು ಪರೀಕ್ಷೆಗೊಳಪಡಿಸಿದ್ದು, ಅವುಗಳಲ್ಲಿ  ಶೇ. 13 ರಷ್ಟು ಆಹಾರೋತ್ಪನ್ನಗಳು ಗುಣ ಮಟ್ಟ ಕಾಯ್ದು ಕೊಂಡಿಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿವೆ.ಇನ್ನೊಂದು ಆಘಾತಕಾರಿ ಅಂಶವೆಂದರೆ ಭಾರತದಲ್ಲಿರುವ ಮಾರಾಟವಾಗುವ ಪ್ಯಾಕ್ಡ್ ಆಹಾರೋತ್ಪನ್ನಗಳು ಸುರಕ್ಷಿತವಲ್ಲ ಎಂಬ ಮಾಹಿತಿ
ಹೊರಬಿದ್ದಿದೆ. ಅಸುರಕ್ಷಿತ ಆಹಾರಗಳ ಪಟ್ಟಿಯಲ್ಲಿ ಭಾರತ ನಂ. 1 ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದೆ. ಚೀನಾದಲ್ಲಿ ಶೇ. 9.9 ಉತ್ಪನ್ನಗಳು ತಿರಸ್ಕೃತಗೊಂಡಿವೆ. ಇನ್ನು ರಾಜ್ಯವಾರು ಅಂಕಿ-ಅಂಶಗಳನ್ನು ನೋಡುವುದಾದರೆ, ಮಧ್ಯಪ್ರದೇಶ (ಶೇ. 40), ಉತ್ತರ ಪ್ರದೇಶ (ಶೇ.36) ರಷ್ಟು ಅಸುರಕ್ಷಿತ ಆಹಾರೋತ್ಪನ್ನಗಳು 2013-14ರಲ್ಲಿ ಪತ್ತೆಯಾಗಿವೆ. ಉತ್ತರ ಪ್ರದೇಶದಲ್ಲಿ ಕಲ ಬೆರೆಕೆ ಉತ್ಪನ್ನಗಳು ಹೆಚ್ಚಾಗುತ್ತಿವೆ  ಎಂಬ ಆತಂಕದ ಅಂಶಗಳೂ ಇದೇ ವೇಳೆ ವೇಳೆ ಬೆಳಕಿಗೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com