
ನವದೆಹಲಿ: ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧಕ್ಕೀಡಾದ ಮ್ಯಾಗಿ ನೂಡಲ್ಸ್ ಉತ್ಪಾದಕ ಸಂಸ್ಧೆ ನೆಸ್ಲೆ ತಾನು ಈಗಾಗಲೇ ಉತ್ಪಾದಿಸಿದ್ದ 320 ಕೋಟಿ ರೂಪಾಯಿ ಮೌಲ್ಯದ ಮ್ಯಾಗಿಯನ್ನು ನಾಶ ಮಾಡಲು ಮುಂದಾಗಿದೆ.
ಮ್ಯಾಗಿ ನೂಡಲ್ಸ್ ನಲ್ಲಿ ನಿಗದಿತ ಮಿತಿಗಿಂತಲೂ ಸೀಸ್ ಹಾಗೂ ಮೊನೊ ಸೋಡಿಯಂ ಗುಟ್ಲಮೆಟ್ ಅಂಶಗಳಿರುವ ಕಾರಣ ರಾಷ್ಟ್ರೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಮ್ಯಾಗಿ ಮಾರಾಟದ ಮೇಲೆ ಜೂನ್ 5 ರಂದು ನಿಷೇಧ ಹೇರಿತ್ತು.
ಗ್ರಾಹಕರ ಹಿತಾದೃಷ್ಠಿಯಿಂದ ಮ್ಯಾಗಿ ಮಾರಾಟವನ್ನು ಹಿಂಪಡೆದಿತ್ತು. ಇದೀಗ ಮಾರುಕಟ್ಟೆ, ಕೈಗಾರಿಕೆ ಹಾಗೂ ವಿತರಣಾ ಕೇಂದ್ರಗಳಿಂದ ಮ್ಯಾಗಿಯನ್ನು ಹಿಂಪಡೆದು ಅದನ್ನು ನಾಶ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನೆಸ್ಲೆ ಸಂಸ್ಥೆ ತಿಳಿಸಿದೆ.
ನಮ್ಮ ಪಾಲುದಾರರದ್ದು ಸೇರಿಕೊಂಡು ಮಾರುಕಟ್ಟೆಯಲ್ಲಿರುವ ಮ್ಯಾಗಿ ಮಾರಾಟ ಮೌಲ್ಯ 210 ಕೋಟಿ ರೂಪಾಯಿ. ಅಲ್ಲದೇ, ಮ್ಯಾಗಿ ಹಿಂಪೆಡೆಯುವ ಘೋಷಣೆ ಹೊರಬಿದ್ದಾಗ ನಮ್ಮ ಕಾರ್ಖಾನೆಗಳು ಹಾಗೂ ವಿತರಣಾ ಕೇಂದ್ರಗಳಲ್ಲಿದ್ದ ಮ್ಯಾಗಿ ಹಾಗೂ ಸಂಬಂಧಿತ ಸರಕುಗಳ ಮೌಲ್ಯ 110 ಕೋಟಿ ರೂಪಾಯಿ’ ಎಂದು ನೆಸ್ಲೆ ಇಂಡಿಯಾ ಮುಂಬೈ ಷೇರು ವಿನಿಯಮ ಕೇಂದ್ರಕ್ಕೆ ತಿಳಿಸಿದೆ.
Advertisement