
ನವದೆಹಲಿ: ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲಾಗಿದೆ. ಇಂದಿನಿಂದ( ಸೋಮ ವಾರ) ಎಸಿ ದರ್ಜೆಯ ಬೋಗಿಗಳಿಗೆ ಪ್ರಯಾಣದ ಹಿಂದಿನ ದಿನ ಬೆಳಿಗ್ಗೆ 10 ರಿಂದ 11ರವರೆಗೆ, ಎಸಿ ಅಲ್ಲದ ಬೋಗಿಗಳ ಸೀಟು ಬುಕಿಂಗ್ ಗೆ ಬೆಳಿಗ್ಗೆ 11ರಿಂದ 12ರವರೆಗೆ ಸಮಯ ನಿಗದಿಪಡಿಸಲಾಗಿದೆ.
ಅಷ್ಟೇ ಅಲ್ಲದೆ, ತತ್ಕಾಲ್ ಟಿಕೆಟ್ ರದ್ದುಪಡಿಸಿದವರಿಗೆ ಒಂದಷ್ಟು ದಂಡದ ಹಣವನ್ನು ಹಿಡಿದುಕೊಂಡು ಉಳಿದ ಹಣವನ್ನು ವಾಪಾಸು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಎಷ್ಟು ಮೊತ್ತವನ್ನು ಹಿಡಿದಿಟ್ಟುಕೊಳ್ಳ ಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
ಐಆರ್ ಸಿಟಿಸಿ ಸೇರಿದಂತೆ ಎಲ್ಲಾ ಟಿಕೆಟ್ ಏಜೆಂಟ್ ಗಳಿಗೆ ಬುಕಿಂಗ್ ಆರಂಭಗೊಂಡ 30 ನಿಮಿಷಗಳವರೆಗೆ ತತ್ಕಾಲ್ ಅಲ್ಲದ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ತೆಗೆದುಹಾಕಲಾಗಿದೆ.
ತತ್ಕಾ ಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಕಂಪ್ಯೂಟರ್ ನ ಸರ್ವರ್, ಕಡೆ ಗಳಿಗೆಯಲ್ಲಿ ಉಂಟಾಗುವ ಭಾರೀ ಒತ್ತಡ ಸಮಸ್ಯೆಗಳನ್ನು ಸರಿಪಡಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ.
Advertisement