ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ಬೇಬಿ ಫುಡ್ ನಲ್ಲಿ ಜೀವಂತ ಹುಳುಗಳು ಪತ್ತೆ !

ಭಾರತದಾದ್ಯಂತ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಬ್ಯಾನ್ ಆಗಿದ್ದು, ಇದೀಗ ನೆಸ್ಲೆಯ ಸಂಸ್ಥೆಯ ಉತ್ಪನ್ನವಾದ ಮಕ್ಕಳ ಆಹಾರ ಸೆರೆಲ್ಯಾಕ್‌ನಲ್ಲಿ ಜೀವಂತ ಹುಳುಗಳು ಕಾಣಿಸಿವೆ...
ನೆಸ್ಲೆ ಸೆರೆಲ್ಯಾಕ್‌
ನೆಸ್ಲೆ ಸೆರೆಲ್ಯಾಕ್‌

ಕೊಯಮತ್ತೂರು: ಭಾರತದಾದ್ಯಂತ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಬ್ಯಾನ್ ಆಗಿದ್ದು, ಇದೀಗ ನೆಸ್ಲೆಯ ಸಂಸ್ಥೆಯ ಉತ್ಪನ್ನವಾದ ಮಕ್ಕಳ ಆಹಾರ ಸೆರೆಲ್ಯಾಕ್‌ನಲ್ಲಿ ಜೀವಂತ ಹುಳುಗಳು ಕಾಣಿಸಿವೆ.

ಕೊಯಮತ್ತೂರು ಪೆರೂರ್ ನ ಸಾಫ್ಟ್‌ವೇರ್ ಉದ್ಯೋಗಿ ಶ್ರೀರಾಮ್ ಎಂಬವರು ತಮ್ಮ ಒಂದು ವರ್ಷದ ಮಗುವಿಗಾಗಿ ನೆಸ್ಲೆಯ ಉತ್ಪನ್ನವಾದ ಸೆರೆಲ್ಯಾಕ್ ಬೇಬಿ ಫುಡ್ ತಂದಿದ್ದರು. ಅವರ ಪತ್ನಿ ಅದನ್ನು ತೆರೆದಾಗ ಪ್ಯಾಕೆಟ್ ನಲ್ಲಿ ಕೆಂಪು ಬಣ್ಣದ ಹಲವಾರು ಜೀವಂತ ಸಣ್ಣ ಸಣ್ಣ ಹುಳುಗಳು ಕಂಡುಬಂದಿವೆ. ಕೂಡಲೇ ಉತ್ಪನ್ನದ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಿದಾಗ ಫೆಬ್ರವರಿ 2016 ಆಗಿತ್ತು ಎಂಬುದನ್ನು ಶ್ರೀರಾಮ್ ಸ್ಪಷ್ಟಪಡಿಸಿದ್ದಾರೆ.

ಶ್ರೀರಾಮ್ ಈಗ ಆಹಾರ ಸಂರಕ್ಷಣಾ ಘಟಕಕ್ಕೆ ಈ ಸಂಬಂಧ ದೂರು ನೀಡಿದ್ದಾರೆ. ಈ ಪ್ಯಾಕೇಟನ್ನು ಪಡೆದುಕೊಂಡಿರುವ ಅಧಿಕಾರಿಗಳು ಇದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಉತ್ಪಾದನೆ ವೇಳೆ ಹುಳುಗಳ ಮೊಟ್ಟೆ ಸೇರಿಕೊಂಡಿರುವ ಪರಿಣಾಮ ಈಗ ಮೊಟ್ಟೆಯೊಡೆದು ಮರಿಗಳಾಗಿರಬಹುದೆಂದು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com