
ನವದೆಹಲಿ: ಆರ್‌ಜೆಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಜೆಟ್ ಏರ್‌ವೇಸ್ ವಿಮಾನದ ಗಗನಸಖಿಯೊಬ್ಬರು ದೂರು ನೀಡಿದ್ದಾರೆ.
ಪಟ್ನಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಪಪ್ಪು ಯಾದವ್ ಪ್ರಯಾಣಿಸುತ್ತಿದ್ದರು. ಪ್ರಯಾಣದ ಆರಂಭದಿಂದಲೇ ಪಪ್ಪು ಯಾದವ್ ಅನುಚಿತವಾಗಿ ವರ್ತಿಸುತ್ತಿದ್ದರು.
ವಿಮಾನ ಪ್ರಯಾಣದ ಸುರಕ್ಷಾ ಮಾರ್ಗಸೂಚಿಗಳನ್ನೂ ಅವರು ಅನುಸರಿಸುತ್ತಿರಲಿಲ್ಲ. ಚೆಲ್ಲಿದ ತಿನಿಸು ಶುಚಿಗೊಳಿಸುವಂತೆ ಕಾಲಿನಿಂದ ತೋರಿಸಿದರು. ಈ ಕೆಲಸವನ್ನು ಗಗನಸಖಿಯರೇ ಮಾಡಬೇಕು. ಒಂದು ವೇಳೆ ತಾವು ಹೇಳಿದ ಕೆಲಸವನ್ನು ಮಾಡದಿದ್ದರೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿ ನನ್ನನ್ನು ಎಳೆದಾಡಿದರು ಎಂದು ಗಗನಸಖಿ ದೂರಿನಲ್ಲಿ ತಿಳಿಸಿದ್ದಾರೆ.
Advertisement