ರಾಷ್ಟ್ರಧ್ವಜಕ್ಕೆ ಅಪಮಾನ: ಅಮಿತಾಭ್, ಅಭಿಶೇಕ್‌ ವಿರುದ್ಧ ಪ್ರಕರಣ

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದಡಿ ಬಾಲಿವುಡ್‌ನ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಹಾಗೂ ಪುತ್ರ ಅಭಿಷೇಕ್‌ ಬಚ್ಚನ್‌ ವಿರುದ್ಧ 1971ರ...
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಗಾಜಿಯಾಬಾದ್‌: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದಡಿ ಬಾಲಿವುಡ್‌ನ  ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಹಾಗೂ ಪುತ್ರ ಅಭಿಷೇಕ್‌ ಬಚ್ಚನ್‌ ವಿರುದ್ಧ 1971ರ ರಾಷ್ಟ್ರೀಯ ಗೌರವ ರಕ್ಷಣೆ ಕಾಯ್ದೆಯ ಕಲಂ 2 ಹಾಗೂ 2002ರ ಭಾರತ ಧ್ವಜ ಸಂಹಿತೆಯಡಿ ಗಾಜಿಯಾಬಾದ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವೊಂದು ಪ್ರಕರಣ ದಾಖಲಾಗಿದೆ.

ಮಿತ್ರ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಸದಸ್ಯ ಚೇನತ್‌ ಧಿಮಾನ್‌ ರಾಷ್ಟ್ರಧ್ವಜಕ್ಕೆ ಅಮಿತಾಭ್‌ ಹಾಗೂ ಅವರ ಪುತ್ರ ಅಭಿಷೇಕ್ ಅವರು ಅಗೌರವ ತೋರಿದ್ದಾರೆ ದೂರು ಸಲ್ಲಿಸಿದ್ದರು.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಭಾರತ ಕ್ರಿಕೆಟ್‌ ತಂಡ ಸಾಧಿಸಿತ್ತು. ಫೆಬ್ರುವರಿ 15ರಂದು ತಮ್ಮ  ಜುಹು ನಿವಾಸದ ಮೇಲೆ ನಿಂತು ಪಾಕ್‌ ವಿರುದ್ಧದ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ, ಅಮಿತಾಬ್ ಬಚ್ಚನ್ ತ್ರಿವರ್ಣ ಧ್ವಜವನ್ನು ತಮ್ಮ ಹೆಗಲಿನ ಮೇಲೆ ಇಳಿಬಿಟ್ಟು ತಮ್ಮ ಅಭಿಮಾನಿಗಳತ್ತ ಕೈಬೀಸುತ್ತಿದ್ದರು ಎಂದು  ದೂರಿನಲ್ಲಿ  ಆರೋಪಿಸಿದ್ದಾರೆ.

2011ರ ಏಪ್ರಿಲ್ 2ರಂದು ಭಾರತ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಚಾಂಪಿಯನ್‌ ಆಗಿದ್ದ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಅವರು ತ್ರಿವರ್ಣ ಧ್ವಜವನ್ನು ದೇಹಕ್ಕೆ ಸುತ್ತಿಕೊಂಡು ಅವರೆಡೆಗೆ ಕೈಬೀಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಗಾಜಿಯಾಬಾದ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ದೀರೇಂದ್ರ ಸಿಂಗ್‌ ಅವರು, ಸಿಆರ್‌ಪಿಸಿಯ 200ನೇ ಕಲಂ ಅಡಿಯಲ್ಲಿ  ಹೇಳಿಕೆಯನ್ನು ದಾಖಲಿಸಲು ಜುಲೈ 13ರಂದು ಹಾಜರಾಗುವಂತೆ ದೂರುದಾರಿಗೆ  ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com