ಎದೆಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ !

ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ಎಷ್ಟರಮಟ್ಟಿಗೆ ಪ್ರಮುಖ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ,...
ಎದೆಹಾಲು ತೆಗೆಯಲು ಬಳಸುವ ಯಂತ್ರ
ಎದೆಹಾಲು ತೆಗೆಯಲು ಬಳಸುವ ಯಂತ್ರ

ನ್ಯೂಯಾರ್ಕ್: ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ಎಷ್ಟರಮಟ್ಟಿಗೆ ಪ್ರಮುಖ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದು ಅಥ್ಲೀಟ್‍ಗಳಿಗೆ ಸಹಕಾರಿಯಾಗುತ್ತದೆಯೇ ಎಂಬುದರ ಜಿಜ್ಞಾಸೆ ಈಗ ಆರಂಭಗೊಂಡಿದೆ. ಇದಕ್ಕೆ ಮೂಲ ಕಾರಣ, ನ್ಯೂಯಾರ್ಕ್ ನಲ್ಲಿ ಎದೆಹಾಲಿಗೆ ಹೆಚ್ಚುತ್ತಿರುವ
ಡಿಮ್ಯಾಂಡ್! ಹೌದು, ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಕ್ರೀಡಾಲೋಕದಲ್ಲಿ ಮಿನುಗುವ ಆಸೆ ಹೊತ್ತು ಈ ಕ್ಷೇತ್ರಕ್ಕೆ ಕಾಲಿಡುತ್ತಿರುವ ಅನೇಕ ಯುವ ಅಥ್ಲೀಟ್‍ಗಳು ಸೇರಿದಂತೆ ಹಿರಿಯ ಕ್ರೀಡಾಳುಗಳೂ ಸಾಕಷ್ಟು ಸಂಖ್ಯೆಯಲ್ಲಿ ಈಗ ಎದೆಹಾಲಿನ ಮೊರೆಹೋಗುತ್ತಿದ್ದಾರೆ. ಎದೆ ಹಾಲಿನಲ್ಲಿನ ರೋಗನಿರೋಧಕ ಶಕ್ತಿ ಹಾಗೂ ಹೆಚ್ಚು ಪ್ರೊಟೀನ್  ನಿಂದಾಗಿ ಫಿಟ್ ಆಗಲು
ಅದು ಸಹಕಾರಿ ಎಂಬ ಭಾವನೆ ಹುಟ್ಟಿಕೊಂಡಿದ್ದು, ದಿನಗಳೆದಂತೆ ಅದೀಗ ಒಂದು ಗೀಳಾಗಿ ಪರಿವರ್ತನೆಗೊಂಡಿದೆ.


ಹೀಗಾಗಿ, ಅಲ್ಲಿ ಎದೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್  ಬಂದಿದೆ. ಆನ್ ಲೈನ್  ನಲ್ಲಿ ಎದೆಹಾಲು ಮಾರಾಟ ಮಾಡುವ ಅನೇಕ ಜಾಲತಾಣಗಳು ಹುಟ್ಟಿಕೊಂಡಿದ್ದು, ಇವುಗಳ ಮೂಲಕ ಕ್ರೀಡಾಳುಗಳ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಆದರೆ, ಇದು ಸಾಮಾಜಿಕ ಸಮಸ್ಯೆಗಳಗೂ ಕಾರಣವಾಗಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡದೆ.

ಕಾಡುತ್ತಿರುವ ಕ್ಷೀರ ಕ್ಷಾಮ: ಕೆಲವು ವರ್ಷಗಳ ಹಿಂದೆ, ಅಮೆರಿಕದಲ್ಲಿ ಎದೆಹಾಲು ಕೊರತೆ ಅನುಭವಿಸುವ ತಾಯಂದಿರಿಗೆ ಅನುಕೂಲವಾಗುವ ಸದ್ದುದ್ದೇಶದಿಂದ ಅಲ್ಲಲ್ಲಿ ಎದೆಹಾಲಿನ
ಬ್ಯಾಂಕ್ಗಳನ್ನು ಸ್ಥಾಪಿಸಲಾಗಿತ್ತು.ಲಾಭದ ಉದ್ದೇಶವಿಲ್ಲದೆ ನಡೆಯುತ್ತಿದ್ದ ಈ ಬ್ಯಾಂಕ್‍ಗಳಿಗೆ ಈಗ ಸ್ವಯಂ-ಪ್ರೇರಿತವಾಗಿ ಹಾಲು ದಾನ ನೀಡುವ ಬಾಣಂತಿಯರ ಸಂಖ್ಯೆ ಗಣನೀಯ
ಮಟ್ಟದಲ್ಲಿ ಇಳಿಮುಖವಾಗಿದೆ. ಎದೆಹಾಲಿಗೆ ಸಿಕ್ಕಿರುವ `ವಾಣಿಜ್ಯ ಮೌಲ್ಯ'ದಿಂದಾಗಿ, ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಎದೆಹಾಲನ್ನು ಆನ್‍ಲೈನ್ ಮಾರಾಟ ಕಂಪನಿಗಳಿಗೆ ನೀಡಲು ನಿರ್ಧರಿಸಿ ಅತ್ತ ಕಡೆ ವಾಲಿದ್ದಾರೆ. ಮಿಲ್ಕ್ ಬ್ಯಾಂಕ್‍ಗಳಿಗೆ ಹಾಲು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಇದು, ಎದೆಹಾಲು ಬ್ಯಾಂಕ್ ಗಳ ಮೇಲೆ ಪರಿಣಾಮ ಬೀರಿ, ಅಲ್ಲಿಹಾಲಿನ ಕೊರತೆ ಕಾಡಲಾರಂಭಿಸಿದೆ.ಅಲ್ಲದೆ, ಕೆಲವಾರು ಬ್ಯಾಂಕ್‍ಗಳು  ಮುಚ್ಚುವ ಸ್ಥಿತಿಗೂ ಬಂದು ತಲುಪಿವೆ. ಮಕ್ಕಳಿಗೆ ಅಮೃತವೆನಿಸಿದ ತಾಯಂದಿರ ಎದೆಹಾಲು ಈಗ ಮಾರಾಟ ಸರಕಾಗಿರುವುದರಿಂದ ಅಲ್ಲಿನ ಬಹುತೇಕ ಮಕ್ಕಳಿಗೆ ಎದೆಹಾಲಿನ ಕೊರತೆ ಕಾಡಲಾರಂಭಿಸಿದೆ. ಇದರಿಂದಾಗಿ, ವಿವಿಧ ಕಾರಣಗಳಿಂದ ತಾಯಿಯ ಹಾಲಿನಿಂದ ವಂಚಿತರಾದ ಮಕ್ಕಳಿಗೆ ಈಗ ಅಲ್ಲಿ ಕ್ಷೀರ ಕ್ಷಾಮ ಎದುರಾಗಿದೆ.

ವಿಷವಾಗುತ್ತಿರುವ ಅಮೃತ!: ಇನ್ನೊಂದೆಡೆ, ಅಂತರ್ಜಾಲದಲ್ಲಿ ಸಿಗುವ ತಾಯಿಯಎದೆಹಾಲು ಕೆಲವೊಮ್ಮೆ ಹಸುವಿನ ಹಾಲಿನ ಮಿಶ್ರಿತವಾಗಿರುತ್ತದೆ ಎಂಬ ದೂರುಗಳೂ
ಕೇಳಿಬಂದಿವೆ. ಅಲ್ಲದೆ, ಸರಿಯಿಲ್ಲದ ಕ್ರಮಗಳಿಂದ ಅದನ್ನು ಸಂಸ್ಕರಣೆಗೊಳಿಸದ ಕಾರಣದಿಂದಾಗಿ ಅದು ಕೆಲವೊಮ್ಮೆ ಕಲುಷಿತವಾಗಿರುವ ಉದಾಹರಣೆಗಳೂ
ಕಂಡುಬಂದಿವೆ.



ದೈಹಿಕವಾಗಿ ಫಿಟ್ ಆಗಿರುವುದು ಪ್ರತಿಯೊಬ್ಬಅಥ್ಲೀಟ್‍ನ ಕನಸು. ಆದರೆ, ಅದಕ್ಕಾಗಿ ಎದೆಹಾಲಿನ ಮೊರೆಹೋಗಲೇ ಬೇಕು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆದರೂ, ಇಂಥದ್ದೊಂದು
ಟ್ರೆಂಡ್ ಆಗಿರುವುದು ಸೋಜಿಗ ತಂದಿದೆ.
- ಬಿ.ವಿ. ರಮೇಶ್, ಬ್ಯಾಸ್ಕೆಟ್ ಬಾಲ್‍ತರಬೇತುದಾರರು,
ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ

ಎದೆಹಾಲು ಹೈ ಪ್ರೋಟೀನ್ ಒಳಗೊಂಡಿದ್ದು, ಮಗುವಿಗಷ್ಟೇ ಅಲ್ಲ ಕಿರಿಯ ವಯಸ್ಸಿನ ಮಕ್ಕಳ ಸ್ವಾಸ್ಥ್ಯಕ್ಕೂ ಪೂರಕವಾದುದು ಎಂಬುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಆದರೆ, ಬೆಳವಣಿಗೆ ಪೂರ್ತಿಯಾಗಿರುವ ಅಥ್ಲೀಟ್ ಗಳಿಗೆ ಇದರಿಂದೇನೂ ಉಪಯೋಗವಾಗದು.
-ಡಾ. ಪ್ರಕಾಶ್, ಕ್ರೀಡಾ ವೈದ್ಯರು, ರಾಷ್ಟ್ರೀಯ ಕ್ರೀಡಾಪ್ರಾಧಿಕಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com