ಪ್ರಧಾನಿ ಮೋದಿ ಟ್ವೀಟ್ ಮಾಡಿದ 15 ಯೋಗಾಸನಗಳು

ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ 15 ಪ್ರಮುಖ ಯೋಗ ಆಸನಗಳ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿದ 15 ಯೋಗಾಸನಗಳು

ನವದೆಹಲಿ: ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ 15 ಪ್ರಮುಖ ಯೋಗ ಆಸನಗಳ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಯೋಗ ದಿನಾಚರಣೆಯನ್ನು ಐತಿಸಿಹಾಸಿಕ ಆಚರಣೆಯನ್ನಾಗಿ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ವಹಿಸಿದ್ದು, ರಾಜಪಥದಲ್ಲಿ ಎನ್.ಡಿ.ಎ ಸರ್ಕಾರ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು 170 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿರುವ ಯೋಗಾಸನಗಳ ಬಗ್ಗೆ ಮಾಹಿತಿ ಇಲ್ಲಿದೆ

ಚಲನ ಕ್ರಿಯೆ: ಚಲನ ಕ್ರಿಯೆ ಅಥವಾ ಸಡಿಲಗೊಳಿಸುವ ಕ್ರಿಯೆಯಿಂದ ಮನಸ್ಸನ್ನು ಶಾಂತಿಯಿಂದ ಇರಿಸಲು ಸಾಧ್ಯವಾಗಲಿದೆ.
ವೃಕ್ಷಾಸನ: ಹೆಸರೇ ಹೇಳುವಂತೆ ಯೋಗ ಕ್ರಿಯೆ ನಡೆಸುವ ವ್ಯಕ್ತಿ ಮರದಂತೆ ನಿಂತುಕೊಳ್ಳಲಿದ್ದು ಒತ್ತಡ ಕಡಿಮೆ ಮಾಡಲು ಹಾಗೂ ದೇಹವನ್ನು ಸಡಿಲಗೊಳಿಸಲು ಸಹಕಾರಿಯಾಗಲಿದೆ.

ಪಾದಹಸ್ತಾಸನ
:  ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಹೇಳುತ್ತಾರೆ.  

ಅರ್ಧ ಚಕ್ರಾಸನ: ಅರ್ಧ ಚಕ್ರಾಸನದಿಂದ ದೇಹದ ಸ್ಥಿರತೆ ಉತ್ತಮಗೊಳ್ಳುತ್ತದೆ.

ಶಶಾಂಕಾಸನ : ಶಶಾಂಕಾಸನ ಯೋಗ ಕ್ರಿಯೆಗಳಲ್ಲೇ ಅತ್ಯಂತ ಸುಲಭದ ಅಸನವಾಗಿದ್ದು, ಈ ಆಸನವನ್ನು ಅಭ್ಯಸಿಸುವುದರಿಂದ ಒತ್ತಡ ಹಾಗೂ ಕೋಪವನ್ನು ಕಡಿಮೆ ಮಾಡಬಹುದಾಗಿದೆ.

ವಕ್ರಾಸನ: ಬೆನ್ನುಮೂಳೆಯ ನಮ್ಯತೆಗಾಗಿ ವಕ್ರಾಸನವನ್ನು ಅಭ್ಯಾಸ ಮಾಡಲಾಗುತ್ತದೆ. ಮಧುಮೇಹದ ನಿರ್ವಹಣೆ, ಮಲಬದ್ಧತೆಗೆ ಈ ಆಸನ ಉಪಯುಕ್ತವಾಗುತ್ತದೆ.

ಭುಜಂಗಾಸನ
: ಬೆನ್ನು ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ಭುಜಂಗಾಸನ ಸಹಕಾರಿಯಾಗಿದೆ.

ಸಲಭಾಸನ
: ಕಮಲದ ಭಂಗಿಯಲ್ಲಿರುವ ಈ ಆಸನದಿಂದ ಹೊಟ್ಟೆಗೆ ಉತ್ತಮ ವ್ಯಾಯಾಮವಾಗಲಿದ್ದು, ಸೊಂಟದ ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಕರಾಸನ: ಮೊಸಳೆ ಭಂಗಿಯಲ್ಲಿರುವ ಈ ಆಸನದಿಂದ ಬೆನ್ನಿನ ಕೆಳಭಾಗದ ನೋವು, ಮೂಳೆ ಕಾಯಿಲೆ, ಶ್ವಾಸಕೋಶ, ಆಸ್ತಮಾದಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆಯಾಗಲಿದೆ.

ಸೇತುಬಂಧಾಸನ
: ಹೆಸರೇ ಹೇಳುವಂತೆ ಈ ಆಸನವನ್ನು ಸೇತುವೆ ಭಂಗಿಯಲ್ಲಿ ಪ್ರದರ್ಶಿಸಲಾಗುತ್ತದೆ. ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಗೊಳಿಸಬಹುದಾಗಿದೆ.

ಪವನಮುಕ್ತಾಸನ: ಈ ಆಸನದಿಂದ ಜೀರ್ಣ ಶಕ್ತಿ ಹೆಚ್ಚುಗೊಳ್ಳಲಿದೆ.  

ಶವಾಸನ: ಯೋಗ ಅಂತಿಮ ಹಂತದ ಆಸನದಲ್ಲಿ ಶವಾಸನ ಪ್ರಮುಖವಾದದ್ದು, ಶವಾಸನ ಇಲ್ಲದೇ ಯೋಗ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

ಅನುಲೋಮ ವಿಲೋಮ
:ಶ್ವಾಸಕೋಶ ಶುದ್ಧಿಗೆ ಅನುಲೋಮ, ವಿಲೋಮವನ್ನು ಅಭ್ಯಾಸ ಮಾಡಲಾಗುತ್ತದೆ. ಕೆಮ್ಮಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com