ಯುಜಿಸಿಯಿಂದ ಕೆಎಸ್ಒಯು ಕೋರ್ಸ್ ಗಳ ಮಾನ್ಯತೆ ರದ್ದು

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ದ ಮಾನ್ಯತೆಯನ್ನು ರದ್ದುಗೊಳಿಸಿದೆ.
ಕೆಎಸ್ಒಯು(ಸಾಂದರ್ಭಿಕ ಚಿತ್ರ )
ಕೆಎಸ್ಒಯು(ಸಾಂದರ್ಭಿಕ ಚಿತ್ರ )

ಬೆಂಗಳೂರು: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ದ ಮಾನ್ಯತೆಯನ್ನು ರದ್ದುಗೊಳಿಸಿದೆ.

ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012 -2013 ರ ನಂತರದ ಮುಕ್ತ ವಿಶ್ವವಿದ್ಯಾನಿಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಯುಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳು ಕೆ.ಎಸ್.ಒ.ಯು ವಿವಿಯಲ್ಲಿ 2012 -13 ನಂತರದ ಯಾವುದೇ ವೃತ್ತಿಪರ/ ತಾಂತ್ರಿಕ ಕೋರ್ಸ್ ಗಳಿಗೂ ನೋಂದಣಿ ಮಾಡದಂತೆ ಯು.ಜಿ.ಸಿ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಗೊಂಡಿರುವುದನ್ನು ಸ್ಪಷ್ಟಪಡಿಸಿರುವ ವಿವಿಯ ಕುಲಪತಿ ಪ್ರೊ. ಎಂ.ಜಿ ಕೃಷ್ಣನ್, ಮಾನ್ಯತೆ ರದ್ದುಗೊಡಿರುವುದರಿಂದ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ, ಯುಜಿಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಗೊಂಡಿರುವುದರಿಂದ ವಿವಿಯಲ್ಲಿ ದೂರಶಿಕ್ಷಣ ಪಡೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com