
ಲಾಸ್ ಏಂಜಲೀಸ್: ಅಮೆರಿಕಾದ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಪ್ರಪ್ರಥಮವಾಗಿ ತೃತೀಯ ಲಿಂಗಿಯೊಬ್ಬರು ತಮ್ಮ ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿದಿದ್ದಾರೆ. ಮುಂದಿನ ಬೇಸಿಗೆ ಸೀಸನ್ ಗಾಗಿ ನಡೆಸುತ್ತಿರುವ ಶೋ ನಲ್ಲಿ 25 ವರ್ಷದ ಆಡ್ರೆ ಮಿಡಲ್ ಟನ್ ಸ್ಪರ್ಧಿಸಿದ್ದಾರೆ.
ಬಿಗ್ ಬ್ರದರ್ ರಿಯಾಲಿಟಿ ಶೋ ನ ಪಕ್ಕಾ ಅಭಿಮಾನಿಯಾಗಿರುವ ಆಡ್ರೆ ಮಿಡಲ್ ಟನ್ ಶೋನಲ್ಲಿ ಭಾಗವಹಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಅರ್ಜಿ ಸಲ್ಲಿಸುವಾಗ ತಮ್ಮ ಲಿಂಗ ಪರಿವರ್ತನೆ ಬಗ್ಗೆ ಖಚಿತ ಮಾಹಿತಿ ನೀಡಿದ್ದರು ಸಿಬಿಎಸ್ ವಕ್ತಾರರು ವಿವರಿಸಿದ್ದಾರೆ.
ಬಿಗ್ ಬ್ರದರ್ ರಿಯಾಲಿಟಿ ಶೋನ 17 ಸೀಸನ್ ಗಳನ್ನು ಪೂರೈಸಿರುವ ಮಿಡಲ್ ಟನ್ ಮೊದಲ ಹೆಸರು ಆಡಂ. ಜೂನ್ 24 ರಂದು ಪ್ರಸಾರವಾಗುವ ಪ್ರೀಮಿಯರ್ ಶೋ ನಲ್ಲಿ ತಮ್ಮ ಎಲ್ಲಾ ವಯಕ್ತಿಕ ವಿಷಯಗಳನ್ನು ಭಾಗವಹಿಸಿರುವ ಇತರ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳಲು ಮಿಡಲ್ಟನ್ ಚಿಂತಿಸಿರುವುದಾಗಿ ವಕ್ತಾರರು ತಿಳಿಸಿದ್ದಾರೆ.
ಡಿಜಿಟಲ್ ಮೀಡಿಯಾ ಸಲಹೆಗಾರರಾಗಿದ್ದ ಮಿಡಲ್ ಟನ್ ಜಾರ್ಜಿಯಾ ಎಂಬ ಸಣ್ಣ ಹಳ್ಳಿಯಿಂದ ಬಂದವರು. ಸದಾ ಸುಂದರವಾಗಿ ಕಾಣಬೇಕೆಂದು ಮಿಡಲ್ ಟನ್ . ಚೆನ್ನಾಗಿ ಡ್ರೆಸ್ ಹಾಗೂ ಮೇಕಪ್ ಮಾಡಿಕೊಳ್ಳುವುದು ಇಷ್ಟವಂತೆ.
Advertisement