ಪ್ಯಾರಿಸ್ ಏರ್ಪೋರ್ಟಲ್ಲೇ ರಾತ್ರಿ ಕಳೆದ 40 ಮಕ್ಕಳು

ಏರ್ ಇಂಡಿಯಾ ನಿರ್ಲಕ್ಷ್ಯದಿಂದ ಪ್ಯಾರಿಸ್ ಏರ್ ಪೋರ್ಟ್‍ನಲ್ಲಿ ಭಾರತದ 40 ಮಕ್ಕಳು ತೊಂದರೆ ಅನುಭವಿಸಬೇಕಾಯಿತು. ಮಂಗಳವಾರ ರಾತ್ರಿ ಪೂರ್ತಿ ಏರ್ ಪೋರ್ಟ್‍ ನ ಮೊದಲ ಮಹಡಿಯಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ಕಳೆಯುವಂತಾಗಿದೆ...
ಪ್ಯಾರಿಸ್ ಏರ್ಪೋರ್ಟಲ್ಲೇ ರಾತ್ರಿ ಕಳೆದ 40 ಮಕ್ಕಳು (ಸಾಂದರ್ಭಿಕ ಚಿತ್ರ)
ಪ್ಯಾರಿಸ್ ಏರ್ಪೋರ್ಟಲ್ಲೇ ರಾತ್ರಿ ಕಳೆದ 40 ಮಕ್ಕಳು (ಸಾಂದರ್ಭಿಕ ಚಿತ್ರ)

ನವದೆಹಲಿ: ಏರ್ ಇಂಡಿಯಾ ನಿರ್ಲಕ್ಷ್ಯದಿಂದ ಪ್ಯಾರಿಸ್ ಏರ್ ಪೋರ್ಟ್‍ನಲ್ಲಿ ಭಾರತದ 40 ಮಕ್ಕಳು ತೊಂದರೆ ಅನುಭವಿಸಬೇಕಾಯಿತು. ಮಂಗಳವಾರ ರಾತ್ರಿ ಪೂರ್ತಿ ಏರ್ ಪೋರ್ಟ್‍ ನ ಮೊದಲ ಮಹಡಿಯಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ಕಳೆಯುವಂತಾಗಿದೆ.

ಎಐ 142 ಏರ್ ಇಂಡಿಯಾ ವಿಮಾನವು ಜೂ. 16ರ ರಾತ್ರಿ ತಾಂತ್ರಿಕ ಕಾರಣವೊಡ್ಡಿ ರಾತ್ರಿ 10 ಗಂಟೆಗೆ ಪ್ರಯಾಣಿಸಬೇಕಿದ್ದ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಈ ವಿಮಾನದಲ್ಲಿ ಭಾರತದ 40 ಮಂದಿ ವಿದ್ಯಾರ್ಥಿಗಳೂ ಪ್ರಯಾಣಿಸುವವರಿದ್ದರು. ಹೀಗೆ ದಿಡೀರನೆ ವಿಮಾನ ಸ್ಥಗಿತಗೊಂಡಿದ್ದರಿಂದ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಏರ್ ಇಂಡಿಯಾ ಸಿಬ್ಬಂದಿ ಇದಾವುದನ್ನೂ ಮಾಡದೆ, ವಿದ್ಯಾರ್ಥಿಗಳನ್ನು ಬಲವಂತವಾಗಿ ಮಹಡಿಯಲ್ಲಿ ಸೋಪಾಗಳ ಮೇಲೆಯೇ ಮಲಗಲು ಹೇಳಿದ್ದಾರೆ.

ತೆಳುವಾದ ಬೆಟ್‍ಶೀಟ್ ನೀಡಿದ್ದು, ಕುಡಿಯಲು ನೀರು ಹಾಗೂ ರಾತ್ರಿ ಊಟವನ್ನೂ ನೀಡಲಾಗಿಲ್ಲ. ಬದಲಿಗೆ 10 ಯೂರೋಸ್ ನೀಡಿ ಕೈತೊಳೆದುಕೊಂಡಿದ್ದಾರೆ. ವಿಮಾನ ಆಡಳಿತ ನಿಯಮಾವಳಿ ಪ್ರಕಾರ ಹೀಗೆ ಏಕಾಏಕಿ ವಿಮಾನ ಪ್ರಯಾಣರದ್ದಾದರೆ, ಪ್ರಯಾಣಿಕರಿಗೆ ಪ್ರರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ, ಇದಾವುದೂ ಕ್ರಮ ಕೈಗೊಳ್ಳದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಇದೀಗ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ದೆಹಲಿಯ ಕೆಆರ್ ಮಂಗಲಂ ಶಾಲಾ ಮಕ್ಕಳು ಯುರೋಪ್ ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com