ಪ್ರಧಾನಿ ಭೇಟಿಯಾದ ಗೀತೆ ಸಾಧಕಿ ಮರಿಯಮ್

ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಂಬೈನ 12ರ ಬಾಲಕಿ ಮರಿಯಮ್ ಆಸಿಫ್ ಸಿದ್ದಿಕಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಳು...
ಪ್ರಧಾನಿ ಭೇಟಿಯಾದ ಗೀತೆ ಸಾಧಕಿ ಮರಿಯಮ್
ಪ್ರಧಾನಿ ಭೇಟಿಯಾದ ಗೀತೆ ಸಾಧಕಿ ಮರಿಯಮ್

ನವದೆಹಲಿ: ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಂಬೈನ 12ರ ಬಾಲಕಿ ಮರಿಯಮ್ ಆಸಿಫ್ ಸಿದ್ದಿಕಿ ಗುರುವಾರ ಪ್ರಧಾನಿ ನರೇಂದ್ರ ಮೋದಿ
ಅವರನ್ನು ಭೇಟಿಯಾದಳು.

ಆಕೆಯ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ, ``ಬಾಲಕಿಂುÉೂಬ್ಬಳು ವಿವಿಧ ಧರ್ಮಗಳಲ್ಲಿ ಆಸಕ್ತಿ ಹೊಂದಿರುವುದು ಎಲ್ಲ ಭಾರತೀಯರಿಗೂ ಸ್ಫೂರ್ತಿ'' ಎಂದರು. ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ``ಇಂದು ನನ್ನ ಪುಟ್ಟ ಗೆಳತಿ ಮರಿಯಮ್ ಆಸಿಫ್ ಸಿದ್ದಿಕೆಯನ್ನು ಭೇಟಿಯಾದೆ. ಈಕೆ ಇಸ್ಕಾನ್ ಆಯೋಜಿಸಿದ್ದ ಭಗವದ್ಗೀತೆ ಸ್ಪರ್ಧೆಯ ವಿಜೇತೆ'' ಎಂದರು.

ತಂದೆ ಆಸಿಫ್ ನಸೀಮ್ ಸಿದ್ದಿಕಿ ಹಾಗೂ ತಾಯಿ ಫರ್ಹಾನ್ ಆಸಿಫ್ ಸಿದ್ದಿಕಿಯೊಂದಿಗೆ ಬಂದಿದ್ದ ಮರಿಯಮ್, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತಲಾ ರು.11 ಸಾವಿರವನ್ನು ನೀಡಿದಳು. ಇದೇ ವೇಳೆ, ಮೋದಿ ಅವರು ಮರಿಯಮ್ ಗೆ ವಿವಿಧ ಧರ್ಮಗಳ 5 ಕೃತಿಗಳನ್ನು ಉಡುಗೊರೆಯಾಗಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com