ಯೋಗ ಜಾತ್ಯತೀತವಾದದ್ದು, ಮುಸ್ಲಿಂರಿಂದ ಅನಾದಿ ಕಾಲದಿಂದಲೂ ಯೋಗಾಭ್ಯಾಸ: ಅಜಂ ಖಾನ್

ಧಾರ್ಮಿಕ ಬಣ್ಣ ಬಳಿದುಕೊಂಡಿರುವ ಯೋಗಾಚರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪರ ವಿರೋಧ, 'ಸೂರ್ಯ ನಮಸ್ಕಾರಕ್ಕೆ ಹೆಚ್ಚು ಒತ್ತು ನೀಡುವ...
ಅಜಂ ಖಾನ್
ಅಜಂ ಖಾನ್

ರಾಮ್‌ಪುರ್‌: ಧಾರ್ಮಿಕ ಬಣ್ಣ ಬಳಿದುಕೊಂಡಿರುವ ಯೋಗಾಚರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪರ ವಿರೋಧ, 'ಸೂರ್ಯ ನಮಸ್ಕಾರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಿಜೆಪಿ ಯೋಗಕ್ಕೆ ಕೋಮು ಬಣ್ಣ ಹಚ್ಚಲು ಯತ್ನಿಸುತ್ತಿದೆ ಎಂದು ಉತ್ತರ ಪ್ರದೇಶದ ಸಚಿವ ಮೊಹಮ್ಮದ್ ಅಜಂ ಖಾನ್ ಹೇಳಿದ್ದಾರೆ.

ಯೋಗ ಜಾತ್ಯತೀತವಾದುದು. ಅದನ್ನು ಮುಸ್ಲಿಮರು ಅನಾದಿ ಕಾಲದಿಂದಲೂ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. 'ಮುಸ್ಲಿಮರ ವಿರೋಧಿಯಾದ ಬಿಜೆಪಿ ಯೋಗಕ್ಕೆ ಸೂರ್ಯ ನಮಸ್ಕಾರವನ್ನು ಸೇರಿಸಿ, ವಿವಾದವೆಬ್ಬಿಸುತ್ತಿದೆ. ಆ ಮೂಲಕ ಧಾರ್ಮಿಕ ವೈರತ್ವ ಬೆಳೆಸಲು ಯತ್ನಿಸುತ್ತಿದ್ದು, ಪ್ರತ್ಯೇಕತೆಗೆ ಮುಂದಾಗಿದೆ,' ಎಂದು ಜವಾಹರ್ ವಿವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅಜಂ ಆರೋಪಿಸಿದ್ದಾರೆ.

ಜಾತ್ಯತೀತವಾದ ಯೋಗವನ್ನು ಎಲ್ಲರೂ ಸ್ವೀಕರಿಸಬೇಕು. 'ಯೋಗವನ್ನು ವಿರೋಧಿಸುವವರನ್ನು ಮುಳುಗಿಸಬೇಕು' ಎಂಬ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್ ಮತ್ತು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುವ ಸಾಕ್ಷಿ ಮಹಾರಾಜ್‌ನಂಥವರು ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ, ಉಳಿದ ನಾಯಕರು ಮೌನಕ್ಕೆ ಶರಣಾಗಿರುತ್ತಾರೆ. ಹೀಗೆ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವಿಷ ಬೀಜ ಬಿತ್ತುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com