ಆಕ್ಷೇಪವಿದ್ರೂ ಜಡ್ಜ್ ಗಳ ನೇಮಿಸಿದ್ದ ಕೊಲಿಜಿಯಂ!

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ವ್ಯವಸ್ಥೆ 2001ರಲ್ಲಿ ಪ್ರಾಮಾಣಿಕತೆಯ ಕುರಿತು ಅನುಮಾನಗಳಿದ್ದರೂ ಇಬ್ಬರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದೆ. ಈ ನೇಮಕ್ಕೆ ಆಗಿನ ಎನ್ ಡಿಎ ಸರ್ಕಾರ ಹಾಗೂ ಸ್ವತಃ ರಾಷ್ಟ್ರಪತಿಗಳ ವಿರೋಧವೂ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ವ್ಯವಸ್ಥೆ 2001ರಲ್ಲಿ ಪ್ರಾಮಾಣಿಕತೆಯ ಕುರಿತು ಅನುಮಾನಗಳಿದ್ದರೂ ಇಬ್ಬರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದೆ. ಈ ನೇಮಕ್ಕೆ ಆಗಿನ ಎನ್ ಡಿಎ ಸರ್ಕಾರ ಹಾಗೂ ಸ್ವತಃ ರಾಷ್ಟ್ರಪತಿಗಳ ವಿರೋಧವೂ ಇತ್ತು ಎಂಬುದು ಇದೀಗ ಬಯಲಾಗಿದೆ.

ಕಳೆದ 20 ವರ್ಷಗಳಲ್ಲಿ ನೂರಕ್ಕೂ ಅಧಿಕ ನ್ಯಾಯಾಧೀಶರನ್ನು ಕೊಲಿಜಿಯಂ ನೇಮಿಸಿದೆ. ಇವುಗಳಲ್ಲಿ 8 ಮಂದಿಯ ಪ್ರಾಮಾಣಿಕತೆ ಕುರಿತು ಪ್ರಶ್ನೆಗಳಿದ್ದವು ಎಂದು ನ್ಯಾ.ಜೆ.ಎಸ್.ಖೆಹರ್ ಅವರಿದ್ದ ಪೀಠಕ್ಕೆ ಸರ್ಕಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಈ ನ್ಯಾಯಮೂರ್ತಿಗಳ ಹೆಸರೂ ಈ ಪಟ್ಟಿಯಲ್ಲಿದೆ.

2000ದಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಎಸ್.ಕೆ. ಗುಪ್ತಾ ಹಾಗೂ ಬ್ರಿಜ್ ಲಾಲ್ ಭಟ್‍ರನ್ನು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕೊಲಿಜಿಯಂ ಆಯ್ಕೆ ಮಾಡಿತ್ತು. ನಿಯಮದಂತೆ ಈ ವೇಳೆ ಕೊಲಿಜಿಯಂ ಜಮ್ಮು ಮತ್ತು ಕಾಶ್ಮೀರ ದಿಂದಲೇ ಬಡ್ತಿ ಪಡೆದಿದ್ದ ಸುಪ್ರೀಂಕೋರ್ಟ್ ನ  ನ್ಯಾಯ ಮೂರ್ತಿ ಆರ್.ಪಿ. ಸೇಥಿ ಅವರ ಅಭಿಪ್ರಾಯ ಕೇಳಿತ್ತು. ನ್ಯಾ.ಸೇಥಿ ಅವರು ಗುಪ್ತಾ ಹಾಗೂ ಭಟ್ ಪ್ರಾಮಾಣಿಕತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ನಂತರ ನಡೆದ ಸಭೆಯಲ್ಲಿ ಗುಪ್ತಾ ಹೆಸರು ಹೊರಗಿಟ್ಟು ಭಟ್ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿತ್ತು. ಆದರೆ ಇದಕ್ಕೆರಾಷ್ಟ್ರಪತಿಯಿಂದ ಆಕ್ಷೇಪ ವ್ಯಕ್ತವಾಗಿತ್ತು.  ನ್ಯಾ.ಸೇಧಿ ಇಬ್ಬರ ಪ್ರಮಾಮಿಕತೆ ಕುರಿತೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸ್ಥಿತಿಯಲ್ಲಿ ಹೇಗೆ ಭಟ್ ಹೆಸರನ್ನಷ್ಟೇ ಶಿಫಾರಸು ಮಾಡಲಾಯಿತೆಂದು ರಾಷ್ಟ್ರಪತಿ ಪ್ರಶ್ನಿಸಿದ್ದರು. ಶಿಫಾರಸನ್ನು ಮರುಪರಿಶೀಲಿಸುವಂತೆಯೂ ಸೂಚಿದ್ದರು.

ರಾಷ್ಟ್ರಪತಿಗಳ ಆಕ್ಷೇಪ ಕೊಲಿಜಿಯಂ ಸಭೆಯಲ್ಲೂ ಪ್ರಸ್ತಾಪವಾಗಿ, 7 ತಿಂಗಳ ನಂತರ ಏ.2, 2001ರಂದು ಗುಪ್ತಾ ಹಾಗೂ ಭಟ್ ಇಬ್ಬರ ಹೆಸರನ್ನೂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿತು. 2ನೇ ಬಾರಿಗೆ ಕೊಲಿಜಿಯಂ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ಅನಿವಾರ್ಯವಾಗಿ ಈ ಪ್ರಸ್ತಾಪಕ್ಕೆ ಸಹಿಹಾಕುವಂತೆ ಸಲಹೆ ನೀಡಬೇಕಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com