ತುರ್ತು ಪರಿಸ್ಥಿತಿ ಕಾಂಗ್ರೆಸನ್ನು ಉದ್ದೇಶಿಸಿ ಹೇಳಿದ್ದು: ಆಡ್ವಾಣಿ

``ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಣೆಯಾದರೆ ಅಚ್ಚರಿಯೇನಿಲ್ಲ'' ಎಂಬ ತಮ್ಮ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‍ಗೆ ನೀಡಿದ ಟಾಂಗ್ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಸ್ಪಷ್ಟಪಡಿಸಿದ್ದಾರೆ...
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ

ನವದೆಹಲಿ: ``ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಣೆಯಾದರೆ ಅಚ್ಚರಿಯೇನಿಲ್ಲ'' ಎಂಬ ತಮ್ಮ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‍ಗೆ ನೀಡಿದ ಟಾಂಗ್ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಆಡ್ವಾಣಿ, ``ನಾನು ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿಲ್ಲ. ತುರ್ತು ಪರಿಸ್ಥಿತಿಯ ಹೇಳಿಕೆಯು ನೇರವಾಗಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಹೇಳಿದ್ದು. 4 ದಶಕಗಳ ಹಿಂದೆ ತುರ್ತು ಪರಿಸ್ಥಿತಿ ಘೋಷಿಸಿದ್ದ ಕಾಂಗ್ರೆಸ್ ಅದರ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪ ಪಟ್ಟಿಲ್ಲ. 1975ರ ತಮ್ಮ ನಿರ್ಧಾರಕ್ಕೆ ಕಾಂಗ್ರೆಸ್‍ನ ಹಿರಿಯ ನಾಯಕರು ಕ್ಷಮೆ ಕೋರಬೇಕು ಎಂಬುವುದೇ ನನ್ನ ಮಾತಿನ ಅರ್ಥವಾಗಿತ್ತು'' ಎಂದಿದ್ದಾರೆ.

ಗುರುವಾರ ಇಂಡಿಯನ್ ಎಕ್ಸ್ ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ಆಡ್ವಾಣಿ ನೀಡಿದ ತುರ್ತು ಪರಿಸ್ಥಿತಿ ಹೇಳಿಕೆಯನ್ನು ಎಲ್ಲರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಹೇಳಿದ್ದು ಎಂದೇ ಅರ್ಥೈಸಿಕೊಂಡಿದ್ದರು. ಇದೇ ವೇಳೆ, ``ನಾನು ಎಲ್ಲ ರೀತಿಯ ಸರ್ವಾಧಿಕಾರವನ್ನೂ ವಿರೋಧಿಸುತ್ತೇನೆ. ಅಹಂಕಾರ ಸರ್ವಾಧಿಕಾರವನ್ನು ಸೃಷ್ಟಿಸುತ್ತದೆ. ನಾಯಕರೆಂದರೆ ವಾಜಪೇಯಿಯವರಂತೆ ಇರಬೇಕು'' ಎಂದೂ ಹೇಳಿರುವ ಆಡ್ವಾಣಿ, ಯಾರನ್ನು ಉದ್ದೇಶಿಸಿ ಹೇಳಿದ್ದೆಂದು ಹೇಳಲು ನಿರಾಕರಿಸಿದ್ದಾರೆ.

ಆಡ್ವಾಣಿ ಬಿಜೆಪಿಯ ಅತಿ ಹಿರಿಯ ನಾಯಕರು. ಅವರೇ ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಎದುರಾಗಬಹುದು ಎಂದು ನೀಡಿರುವ ಹೇಳಿಕೆ ಬಹುಶಃ ಮೋದಿ ಅವರನ್ನೇ ಉದ್ದೇಶವಾಗಿಟ್ಟುಕೊಂಡು ಹೇಳಿದ್ದಿರಬೇಕು. ಒಬ್ಬ ಸಾಮಾನ್ಯ ನಾಯಕ ಹೇಳಿದ್ದರೆ ಆ ಮಾತನ್ನು ನಂಬದೇ ಇರಬಹುದಿತ್ತು. ಆದರೆ ಆಡ್ವಾಣಿಜೀ ಯಂಥ ನಾಯಕರೇ ಹೇಳಿದಾಗ ತುರ್ತು ಪರಿಸ್ಥಿತಿಯ ಚಿಹ್ನೆ ಇದೆ ಎಂದು ಹೇಳಬೇಕಾಗುತ್ತದೆ.

-ಸಿದ್ಧರಾಮಯ್ಯ, ಮುಖ್ಯಮಂತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com