ಸ್ವೀಡನ್: ಮಹಿಳೆಯರ ಮೇಲಷ್ಟೆ ಅಲ್ಲ ಪುರುಷರ ಮೇಲೂ ಅತ್ಯಾಚಾರವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವೀಡನ್ ನ ಸ್ಟಾಕ್ ಹೋಮ್ ನಲ್ಲಿ ಅತ್ಯಾಚಾರಕ್ಕೊಳಗಾದ ಪುರುಷರಿಗಾಗಿಯೇ ವಿಶೇಷ ಕ್ಲಿನಿಕ್ ತೆರೆಯಲಾಗಿದೆ,
ಸ್ಟಾಕ್ ಹೋಂ ನಲ್ಲಿರುವ ಸೌತ್ ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ ಮಹಿಳಾ ಸಂತ್ರಸ್ತರಿಗೆ 24 ಗಂಟೆ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಇದೀಗ ಪುರುಷರ ಮೇಲೂ ಅತ್ಯಾಚಾರಕ್ಕೊಳಗಾದ ಪುರುಷ ಹಾಗೂ ಬಾಲಕರಿಗಾಗಿ ಬರುವ ಅಕ್ಟೋಬರ್ ನಿಂದ ವಿಶೇಷ ಕ್ಲಿನಿಕ್ ತೆರೆಯುವುದಾಗಿ ಆಸ್ಪತ್ರೆ ಘೋಷಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಕಳೆದ ವರ್ಷವೊಂದರಲ್ಲೇ ಪುರುಷರು ಮತ್ತು ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಸುಮಾರು 370 ಪ್ರಕರಣಗಳು ದಾಖಲಾಗಿದ್ದವು, ಇದೇ ಕಾರಣಕ್ಕೆ ಆಸ್ಪತ್ರೆ ವೈದ್ಯರು ಪುರುಷರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದಾರೆ.
ತುರ್ತು ಚಿಕಿತ್ಸೆಯಂಥ ಸಂದರ್ಭದಲ್ಲಿ ಪುರುಷರಿಗೂ ಸಮಾನ ಅವಕಾಶ ಲಭ್ಯವಾಗಬೇಕು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
Advertisement