ಗಿನ್ನಿಸ್ ಪುಸ್ತಕ ಸೇರಲಿಲ್ಲ ಭಾರತ ಯೋಗ ದಾಖಲೆ

ರಾಜಪಥದಲ್ಲಿ ನಡೆಸಿದ ಯೋಗ ಕಾರ್ಯಕ್ರಮದ ಮೂಲಕ ಭಾರತ ಎರಡು ವಿಶ್ವದಾಖಲೆಗಳನ್ನು ಬರೆದಿದ್ದರು, ಈ ವರ್ಷದ ಗಿನ್ನಿಲ್ ದಾಖಲೆ ಪುಸ್ತಕದಲ್ಲಿ ಮುದ್ರಣವಾಗುವ ಭಾಗ್ಯ ಪಡೆದಿಲ್ಲ ಎಂದು ಹೇಳಲಾಗುತ್ತಿದೆ...
ಅಂತರಾಷ್ಟ್ರೀಯ ಯೋಗದಿನದಂದು ಯೋಗ ಮಾಡುವುದರಲ್ಲಿ ನಿರತರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ಅಂತರಾಷ್ಟ್ರೀಯ ಯೋಗದಿನದಂದು ಯೋಗ ಮಾಡುವುದರಲ್ಲಿ ನಿರತರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ರಾಜಪಥದಲ್ಲಿ ನಡೆಸಿದ ಯೋಗ ಕಾರ್ಯಕ್ರಮದ ಮೂಲಕ ಭಾರತ ಎರಡು ವಿಶ್ವದಾಖಲೆಗಳನ್ನು ಬರೆದಿದ್ದರು, ಈ ವರ್ಷದ ಗಿನ್ನಿಲ್ ದಾಖಲೆ ಪುಸ್ತಕದಲ್ಲಿ ಮುದ್ರಣವಾಗುವ ಭಾಗ್ಯ ಪಡೆದಿಲ್ಲ ಎಂದು ಹೇಳಲಾಗುತ್ತಿದೆ.

ರಾಜಪಥದಲ್ಲಿ ಭಾನುವಾರ ನಡೆಸಿದ ಯೋಗ ಕಾರ್ಯಕ್ರಮದಲ್ಲಿ  ಭಾರತ ಎರಡು ವಿಶ್ವದಾಖಲೆಗಳನ್ನು ಮಾಡಿತು. 35,985 ಮಂದಿಯನ್ನೊಳಗೊಂಡ ಬೃಹತ್ ಯೋಗ ಕಾರ್ಯಕ್ರಮ ಒಂದು ದಾಖಲೆಯಾದರೆ, ಏಕೈಕ ಯೋಗ ಕಾರ್ಯಕ್ರಮದಲ್ಲಿ ಅತಿ ಹೆಚ್ಚು(84) ರಾಷ್ಟ್ರಗಳ ಭಾಗಿಯಾಗಿದ್ದು ಮತ್ತೊಂದು ದಾಖಲೆ ಮಾಡಿತ್ತು. ನ್ಯೂಯಾರ್ಕ್ ನ  ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಗಿನ್ನೆಸ್ ದಾಖಲೆ ಹಿರಿಯ ಉಪಾಧ್ಯಕ್ಷ ಮಾರ್ಕೋ ಫ್ರಿಗಟ್ಟಿ ಅವರು ಈ ಘೋಷಣೆ ಮಾಡಿದ್ದರು.

ಭಾರತದ ಎರಡು ವಿಶ್ವದಾಖಲೆ ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ಮುದ್ರಣವಾಗದಿರುವುದರ ಕುರಿತಂತೆ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಿನ್ನಿಸ್ ವಿಶ್ವದಾಖಲೆ ಸಾರ್ವಜನಿಕ ಸಂಪನ್ಮೂಲ ಅಧಿಕಾರಿಯೊಬ್ಬರು, ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ನೊಂದಣಿಯಾಗಲು ಇದ್ದ ಅಂತಿಮ ಗಡುವು ಮುಗಿದಿದ್ದು, 2016 ಸೆಪ್ಟೆಂಬರ್ ವರೆಗಿನ ಗಿನ್ನಿಸ್ ವಿಶ್ವದಾಖಲೆಯ ಪುಸ್ತಕದಲ್ಲಿ ಭಾರತದ ಎರಡು ದಾಖಲೆಗಳು ಮುದ್ರಣವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಅಧಿಕೃತ ವೆಬ್ ಸೈಟ್ ವೊಂದರಲ್ಲಿ ಮಾಹಿತಿ ನೀಡಿರುವ ಗಿನ್ನಿಸ್ ವಿಶ್ವದಾಖಲೆ ಸಂಸ್ಥೆ, ಪ್ರತಿವರ್ಷ 40 ಸಾವಿರಕ್ಕೂ ಹೆಚ್ಚು ದಾಖಲೆಗಳು ನಿರ್ಮಾಣವಾಗುತ್ತದೆ. ಆದರೆ ಗಿನ್ನಿಸಿ ದಾಖಲೆ ಪುಸ್ತಕದಲ್ಲಿ 4 ಸಾವಿರ ದಾಖಲೆಗಳನ್ನಷ್ಟೇ ಮುದ್ರಣ ಮಾಡಲಾಗುತ್ತದೆ. ಇನ್ನುಳಿದ ದಾಖಲೆಗಳು ಮುದ್ರಣವಾಗುವುದಿಲ್ಲ. ಗಿನ್ನಿಸ್ ದಾಖಲೆ ಮಾಡಲು ಅಂತಿಮ ಗಡುವು ಸಹ ಮುಗಿದಿದ್ದು, ಭಾರತದ ಎರಡು ದಾಖಲೆಗಳು ಗಿನ್ನಿಸ್ ಪುಸ್ತಕದಲ್ಲಿ ಮುದ್ರಣವಾಗುವುದಿಲ್ಲ ಎಂದು ಹೇಳಿದೆ.   

ಭಾರತದ ಸಾಮೂಹಿಕ ದಾಖಲೆ
ಸಾಮೂಹಿಕ ಗಿನ್ನೆಸ್ ದಾಖಲೆ ಮಾಡುವ ಪಟ್ಟಿಯಲ್ಲಿ ಭಾರತವೂ ಮುಂದಿದೆ. ಯೋಗ ದಿನದ ವಿಶ್ವ ದಾಖಲೆಯಂತೆಯೇ ಭಾರತ ಮಾಡಿದ ಈವರೆಗಿನ ಸಮೂಹ ದಾಖಲೆ ಪಟ್ಟಿ.

ಸ್ವಚ್ಛ ಭಾರತ
1,200 ಮಂದಿ ಏಕಕಾಲಕ್ಕೆ ಕೈ ತೊಳೆಯುವ ಆಂದೋಲನ ಮಾಡಿದ್ದರು. ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಸಟ್ಟೇನಪಲ್ಲಿಯಲ್ಲಿ 2015, ಸೆ. 27ರಂದು ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಜಿಲ್ಲೆಯ ಸ್ಥಳೀಯ ಆಡಳಿತದ ಜತೆ ಸೇರಿ ಗ್ರಾಮಗಳಾದ್ಯಂತ 20,000 ಶೌಚಾಲಯವನ್ನು ನೂರು ದಿನಗಳಲ್ಲಿ ನಿರ್ಮಾಣ ಮಾಡುವುದೂ ಇದೇ ಆಂದೋಲನದ ಭಾಗವಾಗಿತ್ತು.

ಗರಿಷ್ಠ ಸಾಧನೆ
ಗಿರ್ನಾರ್ ಎಂಬ ಪರ್ವತದ ಮೇಲೆ ಓಡುವ ಸ್ಪರ್ಧೆಯಲ್ಲಿ 2122 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಗುಜರಾತ್‍ನ ಜನಾಗಧ ಜಿಲ್ಲೆಯಲ್ಲಿ ಜ. 4, 2015ರಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಾಮೂಹಿಕ ಭರತನಾಟ್ಯ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಒಂದೇ ವೇದಿಕೆಯಲ್ಲಿ 2,100 ನಾಟ್ಯಕಾರರು ಭರತನಾಟ್ಯ ಪ್ರದರ್ಶಿಸಿದ್ದರು. 2015, ಜ. 10ರಂದು ಪ್ರದರ್ಶನ ನಡೆದಿದ್ದು, ತಪಸ್ಯಾ ಸಿದ್ಧಿ ಕಲಾ ಅಕಾಡೆಮಿ ವತಿಯಿಂದ ಮಹಿಳೆಯರಷ್ಟೇ ನಾಟ್ಯ ಪ್ರದರ್ಶನ ಮಾಡಿದ್ದರು.

ಟೀಂ ಬಾಪು
2013, ಅ. 11ರಂದು ತಮಿಳುನಾಡಿನ ತಿರುಚನಾಪಳ್ಳಿಯ 5 ಶಾಲೆಗಳ 2,955 ಮಕ್ಕಳು ಮಹಾತ್ಮಾ ಗಾಂಧೀಜಿ ಅವರ ವೇಷ ತೊಟ್ಟು ದಾಖಲೆ ಬರೆದಿದ್ದರು.

ನೃತ್ಯ
2012ರ ಮಾ. 1 ರಂದು ಮುಂಬೈನ ಘಾಟ್‍ಪುರನಲ್ಲಿ ಏರ್ಪಡಿಸಿದ್ದ ರಿಯಾಲಿಟಿ ಷೋದಲ್ಲಿ ಒಂದೇ ವೇದಿಕೆಯಲ್ಲಿ 4,428 ಮಂದಿ ನೃತ್ಯ ಮಾಡಿ ದಾಖಲೆ ಮಾಡಿದ್ದರು.

ಯೋಗ ಎಂಬುದು ಕಲೆ ಮತ್ತು ವಿಜ್ಞಾನ ಎರಡೂ ಹೌದು. ಇದನ್ನು ಶತಮಾನಗಳಿಂದಲೂ ಅಭ್ಯಸಿಸುತ್ತಾ ಬರಲಾಗುತ್ತಿದೆ. ಆಧುನಿಕ ಜೀವನಶೈಲಿಯಿಂದ ಬರುವ ದೈಹಿಕ ಸಮಸ್ಯೆಗಳನ್ನು ತಡೆಯುವ ಮತ್ತು ಶಮನಗೊಳಿಸುವ ಶಕ್ತಿ ಯೋಗಕ್ಕಿದೆ.

-ಪ್ರಣಬ್ ಮುಖರ್ಜಿ, ರಾಷ್ಟ್ರಪತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com