ತೆರಿಗೆಗಳ್ಳರ ಸ್ವರ್ಗ ಹೌದು: ಒಪ್ಪಿಕೊಂಡ ಸ್ವಿಜರ್ಲೆಂಡ್
ದೇಶ
ತೆರಿಗೆಗಳ್ಳರ ಸ್ವರ್ಗ ಹೌದು: ಒಪ್ಪಿಕೊಂಡ ಸ್ವಿಜರ್ಲೆಂಡ್
ತೆರಿಗೆಗಳ್ಳರ ಸ್ವರ್ಗವೆಂದು ಕೊನೆಗೂ ಒಪ್ಪಿಕೊಂಡಿರುವ ಸ್ವಿಜರ್ಲೆಂಡ್, ಇನ್ನು ಮುಂದೆ ಬ್ಯಾಂಕಿಂಗ್ ನಿಯಮಗಳನ್ನು ಬಿಗಿಗೊಳಿಸುವುದಾಗಿ ಹೇಳಿಕೊಂಡಿದೆ. ತೆರಿಗೆ ಕಳ್ಳತನ ಹಾಗೂ ಉಗ್ರಚಟುವಟಿಕೆಗೆ ಹಣ ಬಳಕೆಯಾಗುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿಯೂ ತಿಳಿಸಿದೆ...
ಬರ್ನೆ: ತೆರಿಗೆಗಳ್ಳರ ಸ್ವರ್ಗವೆಂದು ಕೊನೆಗೂ ಒಪ್ಪಿಕೊಂಡಿರುವ ಸ್ವಿಜರ್ಲೆಂಡ್, ಇನ್ನು ಮುಂದೆ ಬ್ಯಾಂಕಿಂಗ್ ನಿಯಮಗಳನ್ನು ಬಿಗಿಗೊಳಿಸುವುದಾಗಿ ಹೇಳಿಕೊಂಡಿದೆ. ತೆರಿಗೆ ಕಳ್ಳತನ ಹಾಗೂ ಉಗ್ರ ಚಟುವಟಿಕೆಗೆ ಹಣ ಬಳಕೆಯಾಗುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿಯೂ ತಿಳಿಸಿದೆ.
ತೆರಿಗೆಗಳ್ಳರು ಹಣವನ್ನು ಯುರೋಪ್ ರಾಷ್ಟ್ರದ ಹಲವು ಬ್ಯಾಂಕ್‍ಗಳಲ್ಲಿ ಇಟ್ಟಿರುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಭಾರತ ಹಾಗೂ ಹಲವು ರಾಷ್ಟ್ರಗಳ ಸ್ವಿಜರ್‍ಲೆಂಡ್ ಮೇಲೆ ಒತ್ತಡ ಹಾಕುತ್ತಲೇ ಇದ್ದವು.
ಅಕ್ರಮ ಹಣವನ್ನು ನಮ್ಮ ಬ್ಯಾಂಕ್ ಗಳಲ್ಲಿ ಹೂಡುವುದನ್ನು ತಡೆಯುವ ಬಗ್ಗೆ ನಮಗೆ ಅಧಿಕಾರವಿಲ್ಲ. ಇದೇ ಕಾರಣಕ್ಕೆ ಹಲವಾರು ಮಂದಿ ನಮ್ಮ ದೇಶದ ಬ್ಯಾಂಕ್‍ಗಳಲ್ಲಿ ಹಣ ಇಡುತ್ತಿದ್ದಾರೆ. ಆದರೆ, ಯಾವ ದೇಶದ ಯಾವ ವ್ಯಕ್ತಿ ಹಣ ಇಟ್ಟಿದ್ದಾರೆ ಎಂಬುದನ್ನು ನಾವು ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ಸರ್ಕಾರದ ಉನ್ನತ ಮಟ್ಟದ ಸಮಿತಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ