ಹೋಟೆಲ್ ಖರೀದಿ: ಸಹರಾಗೆ ನ್ಯೂಯಾರ್ಕ್ ಕೋರ್ಟ್ ನೋಟಿಸ್

ನ್ಯೂಯಾರ್ಕ್‍ನಲ್ಲಿನ ಪ್ಲಾಜಾ ಮತ್ತು ಡ್ರೀಮ್ ಡೌನ್‍ಟೌನ್ ಹಾಗೂ ಲಂಡನ್‍ನಲ್ಲಿ ಗ್ರೊಸ್‍ವೆನರ್ ಹೋಟೆಲ್‍ಗಳ ಖರೀದಿ ಡೀಲ್‍ಗೆ ಸಂಬಂಧಿಸಿದಂತೆ...
ಸಹರಾ
ಸಹರಾ

ನ್ಯೂಯಾರ್ಕ್: ನ್ಯೂಯಾರ್ಕ್‍ನಲ್ಲಿನ ಪ್ಲಾಜಾ ಮತ್ತು ಡ್ರೀಮ್ ಡೌನ್‍ಟೌನ್ ಹಾಗೂ ಲಂಡನ್‍ನಲ್ಲಿ ಗ್ರೊಸ್‍ವೆನರ್ ಹೋಟೆಲ್‍ಗಳ ಖರೀದಿ ಡೀಲ್‍ಗೆ ಸಂಬಂಧಿಸಿದಂತೆ ನ್ಯೂಯಾರ್ಕ್‍ನ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಹಾಂಕಾಂಗ್ ಮೂಲದ ಜೆಟಿಎಸ್ ಟ್ರೇಡಿಂಗ್ ಲಿಮಿಟೆಡ್ 35 ಕೋಟಿ ಡಾಲರ್ ಪರಿಹಾರ ನೀಡಬೇಕೆಂದು ಮೊಕದ್ದಮೆ ದಾಖಲಿಸಿದೆ. ಸಹಾರ ಗ್ರೂಪ್‍ಗೆ ಸೇರಿದ ಈ ಮೂರು ಹೋಟೆಲ್‍ಗಳನ್ನು ಖರೀದಿಸಲು ಜೆಟಿಎಸ್ ಸೌದಿ ಅರೇಬಿಯಾ ಮೂಲದ ಟ್ರಿನಿಟಿ ವೈಟ್‍ಸಿಟಿ ವೆಂಚರ್ಸ್ ಜೊತೆ ಜಂಟಿ ಪಾಲುದಾರಿಕೆ ಮಾಡಿಕೊಂಡಿತ್ತು.

ಈ ಖರೀದಿ ಡೀಲ್‍ಗೆ ಸ್ವಿಜರ್‍ಲೆಂಡ್‍ನ ಯುಬಿಎಸ್ ಬ್ಯಾಂಕ್‍ನಿಂದ ಸಾಲ ಪಡೆಯಲು ನಿರ್ಧರಿಸಿದ್ದವು. ಆದರೆ ಟ್ರಿನಿಟಿ ತನ್ನೊಂದಿಗೆ ಪಾಲುದಾರಿಕೆ ಕಡಿತಗೊಳಿಸಿ ಸಹಾರ ಗ್ರೂಪ್ ಜೊತೆ ನೇರವಾಗಿ ವ್ಯವಹಾರ ನಡೆಸುತ್ತಿದೆ. ಸಹಾರ ಗ್ರೂಪ್ ಮತ್ತು ಯುಬಿಎಸ್‍ಗಳು ಟ್ರಿನಿಟಿ ಕಂಪನಿಯ ಈ ವಿಶ್ವಾಸದ್ರೋಹ ಕೆಲಸವನ್ನು ಪ್ರೋತ್ಸಾಹಿಸುತ್ತಿವೆ ಎಂದು ಜೆಟಿಎಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ ಜು.8ರಂದು ಹಾಜರಾಗಿ ಉತ್ತರಿಸಬೇಕೆಂದು ಸೂಚಿಸಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಯುಬಿಎಸ್ ವಕ್ತಾರರು ನಿರಾಕರಿಸಿದ್ದರೆ ಟ್ರಿನಿಟಿ ಮತ್ತು ಜೆಟಿಎಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಹಾರ ಗ್ರೂಪ್ ಮಾತ್ರ ಟ್ರಿನಿಟಿ ಕಂಪನಿ ಜೊತೆ ನಾವು ಯಾವುದೇ ವ್ಯವಹಾರ ನಡೆಸುತ್ತಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com