
ವಾಷಿಂಗ್ಟನ್: 'ಅಮೆರಿಕವು ಇನ್ನೂ ಜನಾಂಗೀಯ ದ್ವೇಷದಿಂದ ಹೊರಬಂದಿಲ್ಲ. ಅದು ಇನ್ನೂ ನಮ್ಮ ಡಿಎನ್‍ಎಯಲ್ಲೇ ಇದೆ'. ಇದು ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದಾಳಿಗಳ ಬಗ್ಗೆ ಅಧ್ಯಕ್ಷ ಬರಾಕ್ ಒಬಾಮ ಕಳವಳ ವ್ಯಕ್ತಪಡಿಸಿದ ರೀತಿ. ಸೌತ್ ಕೆರೋಲಿನಾದ ಚಾರ್ಲ್ಸ್‍ಟನ್ ಚರ್ಚಿನ ಮೇಲೆ ಬಿಳಿ ಸರ್ಣೀಯರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ನಾಡಿದ್ದಾರೆ.
ಸೋಮವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಒಬಾಮ, 'ಜನಾಂಗೀಯ ದ್ವೇಷದಿಂದ ನಾವಿನ್ನೂ ಹೊರಬಂದಿಲ್ಲ. ಸಾರ್ವಜನಿಕವಾಗಿ ನೀಗ್ರೋ ಎಂಬ ಪದವನ್ನು ಬಳಕೆ ಮಾಡುವಂತಿಲ್ಲ ಎಂಬುದಾಗಲೀ, ವರ್ಣಭೇದ ನೀತಿ ಇಂದಿಗೂ ಅಸ್ತಿತ್ವದಲ್ಲಿದೆಯೇ, ಇಲ್ಲವೇ ಎಂಬುದಾಗಲೀ ಇಲ್ಲಿ ಮುಖ್ಯವಲ್ಲ. 200-300 ವರ್ಷಗಳ ಹಿಂದೆ ಇದ್ದವುಗಳನ್ನು ಒಮ್ಮಿಂದೊಮ್ಮೆಲೇ ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.
ನಾನು ಬಿಳಿ ವರ್ಣೀಯ ತಾಯಿ ಮತ್ತು ಕಪ್ಪು ವರ್ಣೀಯ ತಂದೆಗೆ ಹುಟ್ಟಿದವ. ಈಗ ಸ್ವಲ್ಪಮಟ್ಟಿಗೆ ಈ ವಿಚಾರದಲ್ಲಿ ಸುಧಾರಣೆ ಆಗಿದೆಯಾದರೂ, ಗುಲಾಮಗಿರಿಯ ಕರಿನೆರಳು ಮಾತ್ರ ಮಾಯವಾಗಿಲ್ಲ. ಅದು ಈಗಲೂ ನಮ್ಮ ಡಿಎನ್‍ಎಯಲ್ಲೇ ಇದೆ'' ಎಂದಿದ್ದಾರೆ.
Advertisement