ಭೂ ವಿಧೇಯಕ ಅಸ್ತುಗೆ ಜಂಟಿ ಅಧಿವೇಶನ: ಜೇಟ್ಲಿ

ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯುವ ಸರ್ಕಾರದ ಪ್ರಯತ್ನ ಮುಂದುವರಿದಿದೆ. ಈ ಬಾರಿ ವಿಧೇಯಕದ ವಿಚಾರದಲ್ಲಿ ಒಮ್ಮತ ಮೂಡದೇ ಇದ್ದರೆ...
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ: ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯುವ ಸರ್ಕಾರದ ಪ್ರಯತ್ನ ಮುಂದುವರಿದಿದೆ. ಈ ಬಾರಿ ವಿಧೇಯಕದ ವಿಚಾರದಲ್ಲಿ ಒಮ್ಮತ ಮೂಡದೇ ಇದ್ದರೆ ಸಂಸತ್‍ನ ಜಂಟಿ ಅಧಿವೇಶನ ಕರೆದು ಭೂ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

``ಮುಂದಿನ ಹಂತದ ಸುಧಾರಣೆ ಯಶಸ್ವಿಯಾಗಬೇಕೆಂದರೆ ಹಾಗೂ ಭಾರತವು ಪ್ರಗತಿಯ ಗುರಿ ತಲುಪಬೇಕೆಂದರೆ ಭೂ ವಿಧೇಯಕ ಅಂಗೀಕಾರ ಅನಿವಾರ್ಯ'' ಎಂದಿರುವ ಜೇಟ್ಲಿ, ``ಜಂಟಿ ಅಧಿವೇಶನ ಕರೆಯುವಂತಹ ಸನ್ನಿವೇಶ ನಿರ್ಮಾಣವಾಗುವುದು ಬೇಡ. ಅದಕ್ಕೆ ಮೊದಲೇ ಎಲ್ಲರೂ ಒಪ್ಪಿ ವಿಧೇಯಕವನ್ನು ಅಂಗೀಕರಿಸಲಿ'' ಎಂದು ಹೇಳಿದ್ದಾರೆ.

ಆರೆಸ್ಸೆಸ್ ಅಂಗಸಂಸ್ಥೆಗಳ ವಿರೋಧ: ಯುಪಿಎ ಸರ್ಕಾರದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದ ಮೋದಿ ಸರ್ಕಾರದ ನಿರ್ಧಾರಕ್ಕೆ ಸ್ವತಃ ಆರೆಸ್ಸೆಸ್‍ನ ಮೂರು ಅಂಗಸಂಸ್ಥೆಗಳೇ ವಿರೋಧ ವ್ಯಕ್ತಪಡಿಸಿವೆ. ಜಂಟಿ ಸಂಸದೀಯ ಸಮಿತಿಯ ಮುಂದೆ ತಮ್ಮ ಅಬಿsಪ್ರಾಯ ವ್ಯಕ್ತಪಡಿಸಿದ ರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಅಖಿಲ ಭಾರತೀಯ ವನವಾಸಿ ಕಲ್ಯಾಣ್ ಆಶ್ರಮ್, ವಿಧೇಯಕಕ್ಕೆ ತಂದ ತಿದ್ದುಪಡಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com