ಲೈಂಗಿಕ ರೋಗ ಇದೆ ಎಂದು ಗೊತ್ತಾದ ಕೂಡಲೇ ಬಣ್ಣ ಬದಲಿಸುತ್ತೆ ಈ ಕಾಂಡೋಮ್

ಲೈಂಗಿಕ ಕ್ರಿಯೆ ನಡೆಸುವಾಗ ಸಂಗಾತಿಗೆ ಲೈಂಗಿಕ ರೋಗ ಇದೆ ಎಂದು ಪತ್ತೆಯಾದ ಕೂಡಲೇ ಈ ಕಾಂಡೋಮ್ ಬಣ್ಣ ಬದಲಿಸುತ್ತದೆ...
ಕಾಂಡೋಮ್  (ಸಾಂದರ್ಭಿಕ ಚಿತ್ರ)
ಕಾಂಡೋಮ್ (ಸಾಂದರ್ಭಿಕ ಚಿತ್ರ)
Updated on: 

ಲಂಡನ್ : ಲೈಂಗಿಕ ಕ್ರಿಯೆ ನಡೆಸುವಾಗ ಸಂಗಾತಿಗೆ ಲೈಂಗಿಕ ರೋಗ ಇದೆ ಎಂದು ಪತ್ತೆಯಾದ ಕೂಡಲೇ ಈ ಕಾಂಡೋಮ್ ಬಣ್ಣ ಬದಲಿಸುತ್ತದೆ. ಹೌದು ಲೈಂಗಿಕ ಸಂಪರ್ಕದಿಂದ ಹರಡುವ ರೋಗಾಣು ಪತ್ತೆಯಾದ ಕೂಡಲೇ ಬಣ್ಣ ಬದಲಿಸುವಂತಹ ಕಾಂಡೋಮ್‌ನ್ನು ಬ್ರಿಟನ್‌ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಎಸ್‌ಟಿ ಐ (‘S.T.EYE) ಎಂದು ಕರೆಯಲ್ಪಡುವ ಈ ಕಾಂಡೋಮ್ ಲೈಂಗಿಕ ಕ್ರಿಯೆ ನಡೆಸುವ ವೇಳೆ ಲೈಂಗಿಕ ರೋಗ ಹರಡುವ ಬ್ಯಾಕ್ಟೀರಿಯ ಪತ್ತೆಯಾದ ಕೂಡಲೇ ಬಣ್ಣ ಬದಲಿಸುತ್ತದೆ. ವಿಧ ವಿಧದ ಬ್ಯಾಕ್ಟೀರಿಯಗಳು ಇದರ ಸಂಪರ್ಕಕ್ಕೆ ಬಂದೊಡನೆ ಈ ಕಾಂಡೋಮ್ ಬೇರೆ ಬೇರೆ ಬಣ್ಣಕ್ಕೆ ತಿರುಗುತ್ತದೆ.

ಇಲ್‌ಫಾರ್ಡ್‌ನ ಐಸಾಕ್ ನ್ಯೂಟನ್ ಅಕಾಡೆಮಿಯ ದಾನ್ಯಾಲ್ ಅಲಿ, ಮೌಜ್ ನವಾಜ್,ಚಿರಾಗ್ ಶಾ ಎಂಬೀ ವಿದ್ಯಾರ್ಥಿಗಳು ತಯಾರಿಸಿದ ಈ ಕಾಂಡೋಮ್ ಗೆ ಬೆಸ್ಟ್ ಹೆಲ್ತ್ ಇನ್ನೋವೇಶನ್ ಪ್ರಶಸ್ತಿ ಕೂಡಾ ದಕ್ಕಿದೆ.

ಕ್ಲಮೇಡಿಯಾ ಮತ್ತು ಸಿಫಿಲಸ್ ಸೇರಿದಂತೆ ಇನ್ನಿತರ ರೋಗಾಣುಗಳನ್ನು ಈ ಕಾಂಡೋಮ್  ಪತ್ತೆ ಹಚ್ಚುತ್ತಿದೆ ಎಂದು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com