ಲಲಿತ್ ಮೋದಿ ಹಗರಣ: ಮೋದಿ ಭೇಟಿ ಮಾಡಿದ ಮಹಾರಾಷ್ಟ್ರ ಸಿಎಂ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸುದೀರ್ಘ ಚರ್ಚೆ ನಡೆಸಿದರು...
ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಿಎಂ ದೇವೇಂದ್ರ ಫಡ್ನವೀಸ್
ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಿಎಂ ದೇವೇಂದ್ರ ಫಡ್ನವೀಸ್

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸುದೀರ್ಘ ಚರ್ಚೆ ನಡೆಸಿದರು.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ  ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಪ್ರಕರಣ ಹಾಗೂ 206 ಕೋಟಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಗುರಿಯಾಗಿರುವ ಸಚಿವೆ ಪಂಕಜ್ ಮುಂಡೆ ವಿಷಯವಾಗಿ ಚರ್ಚಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ಸಮಲೋಚನೆ ನಡೆಸಿದರು.

ಮುಂಬಯಿ ಪೊಲೀಸ್ ಮಹಾನಿರ್ದೇಶಕ ರಾಕೇಶ್ ಮಾರಿಯಾ ಕಳೆದ ವರ್ಷ  ಬ್ರಿಟನ್ ನಲ್ಲಿ ಲಲಿತ್ ಮೋದಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ ವಿಷಯ ಸಂಬಂಧ ಚರ್ಚೆ ನಡೆಸಿದರು. ಇನ್ನು ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಹಾಗೂ ಗೋಪಿನಾಥ್ ಮುಂಡೆ ಪುತ್ರಿ ಪಂಕಜ್ ಮುಂಡೆ ವಿರುದ್ಧ ಕೇಳಿ ಬರುತ್ತಿರುವ 206 ಕೋಟಿ ರೂಪಾಯಿ ಹಗರಣ ಸಂಬಂಧ ಪ್ರಧಾನಿಗೆ ಫಡ್ನವೀಸ್ ವಿವರಣೆ ನೀಡಿದರು.  

ಪ್ರಧಾನಿ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್ ಪಂಕಜ್ ಮುಂಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಪ್ರಕರಣದ ತನಿಖೆ ನಡೆಸಲಾಗುವುದು. ಪಂಕಜ್ ಮುಂಡೆ ಯಾವುದೇ ಅವ್ಯವಹಾರ ಮಾಡಿಲ್ಲ. ಇಲಾಖೆಯ ನೀತಿ ನಿಯಮದಂತೆ ಕೆಲಸ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

 ಇನ್ನು ರಾಕೇಶ್ ಮಾರಿಯ ಮತ್ತು ಲಲಿತ್ ಮೋದಿ ಭೇಟಿ ಸಂಬಂಧ ವಿವರಣೆ ನೀಡಿದ ಫಡ್ನವೀಸ್ ಮುಂಬಯಿ ಪೊಲೀಸ್ ಮಹಾ ನಿರ್ದೇಶಕರು ನೀಡಿರುವ ಎಲ್ಲಾ ಸ್ಪಷ್ಟನೆಗಳು ಸಮಾಧಾನ ತಂದಿದೆ ಎಂದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com