

ಇಸ್ಲಾಮಾಬಾದ್: ಭಾರತದಲ್ಲೇ ಗೋವುಗಳಿಗೆ ಪೂಜ್ಯ ಸ್ಥಾನ ನೀಡಲು ಭೇದಭಾವ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ಸಂಸದರೊಬ್ಬರು ಗೋವುಗಳು ಹಿಂದೂಗಳ ಗೋಮಾತ. ಅವುಗಳನ್ನು ಪೂಜಿಸುವ ನಮ್ಮ ಹಕ್ಕು ಎಂದು ಎದೆ ತಟ್ಟಿ ಸಮರ್ಥಿಸಿಕೊಂಡಿದ್ದಾರೆ.
ಗೋವು ಪೂಜೆ ಕುರಿತಂತೆ ಹಿಂದೂ ಸಂಸದರನ್ನು ಪಾಕಿಸ್ತಾನದ ಕೆಲ ಸಂಸದರು ಹೀಯಾಳಿದನ್ನು ತೀವ್ರವಾಗಿ ಖಂಡಿಸಿದ ಲಾಲ್ ಮಲಹಿ, ನಾವು ಹಿಂದೂಗಳೇ, ಹಸುಗಳನ್ನು ಪೂಜಿಸುವುದು ನಮ್ಮ ಹಕ್ಕು’ ಅದನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಎದೆ ತಟ್ಟಿ ಹೇಳಿದ್ದಾರೆ.
ನಾನು ಹಿಂದುವಾಗಿದ್ದರು ನಾನೋಬ್ಬ ಪಾಕಿಸ್ತಾನಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಆದರೆ ಇದಕ್ಕೆ ಚ್ಯುತಿ ತರುವಂತಾ ಕೆಲಸಗಳು ನಡೆಯುತ್ತಿವೆ. ಹಿಂದೂ ಯುವಕರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿರುವುದು ಖಂಡನೀಯ ಎಂದರು.
Advertisement