ಗಿಣಿ ಮಾತಿನ ಹಿಂದಿರುವ ರಹಸ್ಯ ಬಯಲು

ಮನುಷ್ಯನಂತೆ ಗಿಳಿ ಮಾತಾಡುವುದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಡ್ಯೂಕ್ ವಿಶ್ವ ವಿದ್ಯಾನಿಲಯ....
ಗಿಳಿ
ಗಿಳಿ

ನವದೆಹಲಿ: ಮನುಷ್ಯನಂತೆ ಗಿಳಿ ಮಾತಾಡುವುದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಡ್ಯೂಕ್ ವಿಶ್ವ ವಿದ್ಯಾನಿಲಯದ  ಸಂಶೋಧಕರ ತಂಡ ಗಿಳಿ ಮಾತಿನ ಹಿಂದಿರುವ ರಹಸ್ಯವನ್ನು ಪತ್ತೆ ಹಚ್ಚಿದ್ದಾರೆ.

ಗಿಣಿ ಮಾತಿನ ರಹಸ್ಯ : ಗಿಳಿಗಳ ಮೆದುಳು ಸಾಧಾರಣವಾಗಿ ಹಾಡುಹಕ್ಕಿಗಳ ಅಥವಾ ಹಮ್ಮಿಂಗ್ ಬರ್ಡ್ ನಂತಿರಲ್ಲ. ಹಾಡುವ ಹಕ್ಕಿಗಳ ದನಿಯನ್ನು ಮೆದುಳು ನಿಯಂತ್ರಿಸುವಂತೆ ಗಿಳಿಗಳಲ್ಲಿ ದನಿ ಹೊರಡಿಸುವ, ದನಿಯನ್ನು ಗ್ರಹಿಸುವ ಶಕ್ತಿಯಿರುವ ಶೆಲ್‌ಗಳು ಮೆದುಳಿನಲ್ಲಿವೆ. ಈ ಶೆಲ್‌ಗಳ ಸಹಾಯದಿಂದ ಗಿಳಿಗಳು ಮನುಷ್ಯನ ಮಾತುಗಳನ್ನು ಅನುಕರಿಸಬಲ್ಲವು.

ಹೆಚ್ಚಿನ ಹಕ್ಕಿಗಳಲ್ಲಿ ಧ್ವನಿ ಹೊರಡಿಸಲು ಸಹಾಯ ಮಾಡುವ ಮೆದುಳಿನವ ಭಾಗವು ಅದರ ಚಲನೆಯನ್ನೂ ನಿಯಂತ್ರಿಸುತ್ತದೆ. ಆದರೆ ಕೆಲವು ಗಿಳಿಗಳ ಜೀನ್‌ಗಳಲ್ಲಿ ವಿಶೇಷ ರೀತಿಯ ಅಂಶಗಳು ಕಂಡು ಬಂದಿವೆ. ಹೀಗೆ ವಿಶೇಷ ರೀತಿಯ ಜೀನ್‌ಗಳನ್ನು ಹೊಂದಿರುವ ಗಿಳಿಗಳು ಮಾತ್ರ ಹಾಡುವುದನ್ನು, ಕುಣಿಯುವುದನ್ನು ಕಲಿಯುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com