
ನವದೆಹಲಿ: ಎನ್‌ಡಿಎ ಸರ್ಕಾರ ಗಂಗಾ ಶುದ್ಧೀಕರಣ ಯೋಜನೆಗೆ ಚಾಲನೆ ನೀಡಿ ವರ್ಷ ಕಳೆದರೂ ವಾಸ್ತವದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಗಂಗಾನದಿಕೊಳ್ಳದಲ್ಲಿ ಅತಿ ಹೆಚ್ಚು ಕೊಳೆ ಹೊರ ಸೂಸುವ 764 ಸೇರಿ 3,200 ಕಾರ್ಖಾನೆಗಳು ಅನೈರ್ಮಲ್ಯ ತಡೆಯಲು ಯಾವುದೇ ಕ್ರಮ ಜರುಗಿಸಿಲ್ಲ ಮತ್ತು ಮೇಲ್ವಿ ಚಾರಣಾ ಸಾಧನಗಳನ್ನು ಅಳವಡಿಸಿಲ್ಲ.
ಜೂನ್ 30 ಈ ಕುರಿತು ಕ್ರಮ ಜರುಗಿಸಲು ಅಂತಿಮ ದಿನವಾಗಿದ್ದು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಕಾರ್ಖಾನೆಗಳಿರಲಿ ಕೇಂದ್ರ ಕೊಳಚೆ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸ್ಥಾಪಿಸಲು ಉದ್ದೇಶಿಸಿದ್ದ 113 ತತ್ ಕ್ಷಣದ ಮೇಲ್ವಿಚಾರಣಾ ಕೇಂದ್ರಗಳು ಭೂ ಸೇರಿದಂತೆ ಹಲವು ಕಾರಣಗಳಿಂದಾಗಿ ಇನ್ನೂ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲು ವಿಫಲವಾಗಿದೆ. ಸಿಪಿಸಿಬಿ ಸನಿಹದಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಗಳು ಇಲ್ಲ. ಈ ಯೋಜನೆ ಇನ್ನೂ ಒಂದು ವರ್ಷ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮಂಡಳಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಭೂಮಿ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ಉತ್ತರಾಖಂಡ್, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳನ್ನು ಸಿಪಿಸಿಬಿ ಮತ್ತೆ ಕೋರಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
Advertisement