ನವದೆಹಲಿ: ಹೊಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಮಾಂಸಾಹಾರ ಅಡುಗೆ ತಯಾರಿಕೆಯನ್ನು ಐಚ್ಛಿಕ ವಿಷಯವಾಗಿ ನೀಡಬೇಕು ಎಂದು ಕೇಂದ್ರ ಜವಳಿ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮನವಿ ಮಾಡಿದ್ದಾರೆ.
ಹಲವು ವಿದ್ಯಾರ್ಥಿಗಳು ಇಷ್ಟವಿಲ್ಲದಿದ್ದರೂ ಕಡ್ಡಾಯ ಎಂಬ ಕಾರಣಕ್ಕೆ ಮಾಂಸಾಹಾರ ತಯಾರಿಕೆ ವಿಷಯವನ್ನು ಕಲಿಯುವಂತಾಗಿದೆ. ಇದನ್ನು ಐಚ್ಛಿಕ ವಿಷಯವಾಗಿಸಿದರೆ, ಸಸ್ಯಾಹಾರಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಟೇಲ್ ಮ್ಯಾನೇಜ್‍ಮೆಂಟ್ ಕೋಸ್ರ್ ನತ್ತ ಆಕರ್ಷಿತರಾಗುತ್ತಾರೆ ಎಂಬ ಅಭಿಪ್ರಾಯ ಹೊಂದಿರುವ ಗಂಗ್ವಾರ್, ಈಗಾಗಲೇ ಸಚಿವೆ ಸ್ಮೃತಿ ಇರಾನಿ ಹಾಗೂ ಸಚಿವ ಮಹೇಶ್ ಶರ್ಮರವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಗೋಹತ್ಯೆ, ಗೋಮಾಂಸ ರಫ್ತು ವಿಷಯಗಳು ಬಿಸಿ ಚರ್ಚೆಯಲ್ಲಿರುವುದರಿಂದ ಗಂಗ್ವಾರ್ ಎತ್ತಿರುವ ದನಿಗೆ ಮಹತ್ವ ದೊರೆತಿದೆ. ತಾವು ಮಾಂಸಾಹಾರ ಪದ್ದತಿಯ ವಿರೋಧಿ ಅಲ್ಲವೆಂದೂ ಆದ್ದರಿಂದಲೇ ಐಚ್ಛಿಕ ವಿಷಯವಾಗಿ ಅದನ್ನು ಪರಿಗಣಿಸಬೇಕೆಂದು
ಕೇಳಿಕೊಂಡಿದ್ದೇನೆಂದು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿ
ಕೊಂಡಿದ್ದು, ಬಿಜೆಪಿಯಲ್ಲಿ ಆಡ್ವಾಣಿಯಿಂದ ಹಿಡಿದು ಯುವಮೋರ್ಛಾ ನಾಯಕ ಅನುರಾಗ್ ಠಾಕೂರ್ ವರೆಗೆ ಹಲವರು ತಮ್ಮ ಅಭಿಪ್ರಾಯವನ್ನು ಬೆಂಬಲಿಸುವವರಿದ್ದಾರೆ ಎಂದಿದ್ದಾರೆ.
Advertisement