ಐಪಿಒಗೆ ಕಾಫಿ ಡೇ

ಕೆಫೆ ಕಾಫಿ ಡೇ ಕಂಪನಿ ಸಾರ್ವಜನಿಕ ಷೇರು ಮಾರಾಟದಿಂದ (ಐಪಿಒ) ರು.1,150 ಕೋಟಿ ಬಂಡವಾಳ ಕ್ರೋಡೀಕರಿಸುವ ಯೋಜನೆ...
ಐಪಿಒಗೆ ಕಾಫಿ ಡೇ

ಮುಂಬೈ: ಕೆಫೆ ಕಾಫಿ ಡೇ ಕಂಪನಿ ಸಾರ್ವಜನಿಕ ಷೇರು ಮಾರಾಟದಿಂದ (ಐಪಿಒ) ರು.1,150 ಕೋಟಿ ಬಂಡವಾಳ ಕ್ರೋಡೀಕರಿಸುವ ಯೋಜನೆ ಹೊಂದಿದೆ. ಕೆಫೆ ಕಾಫಿ ಡೇ ಬೆಂಗಳೂರು ಮೂಲದ ಕಂಪನಿಯಾಗಿದ್ದು ಹೋಟೆಲ್‍ಗಳ ಸರಣಿಯನ್ನು ನಡೆಸುತ್ತಿದೆ.

ಐಪಿಒ ಬಿಡುಗಡೆಗೆ ಅಗತ್ಯವಾದ ದಾಖಲೆಗಳನ್ನು ಕಂಪನಿ ಶುಕ್ರವಾರ ಸೆಬಿಗೆ ಸಲ್ಲಿಸಿದೆ. ಕೊಟಕ್ ಮಹೀಂದ್ರ ಕ್ಯಾಪಿಟಲ್ ಕಂಪನಿ, ಮಾರ್ಗನ್ ಸ್ಟ್ಯಾನ್ಸಿ, ಸಿಟಿ ಗ್ರೂಪ್ ಎಡೆಲ್‍ವೇಸ್ ಈ ಪ್ರಕ್ರಿಯೆ ಕೈಗೊಳ್ಳಲಿವೆ.

ಕೆಫೆ ಕಾಫಿ ಡೇ ಮಾತೃಸಂಸ್ಥೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್(ಸಿಡಿಇಎಲ್)ನಲ್ಲಿ ಹೂಡಿಕೆ ಸಂಸ್ಥೆಗಳಾದ ಕೆಕೆಆರ್ ಅಡ್ವೈಸರ್ಸ್, ನ್ಯೂ ಸಿಲ್ಕ್ ರೂಟ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಕಂಪನಿಗಳು 149.07 ದಶಲಕ್ಷ ಡಾಲರ್ ತೊಡಗಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com