ಜು.5ರಂದು ಗ್ರೀಕ್ ಜನಾದೇಶ: ಅಲೆಕ್ಸಿ
ಅಥೆನ್ಸ್: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಗ್ರೀಸ್ ಸುಸ್ತಿ ದೇಶವಾಗುವುದನ್ನು ತಡೆಯಲು ಮತ್ತು ಅಲ್ಲಿನ ಆರ್ಥಿಕ ಚಟುವಟಿಕೆಗಳು ಮುಂದುವರೆಸಲು ಹೊಸ ಸಾಲ ನೀಡಲು ಐಎಂಎಫ್ ಮತ್ತು ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ) ಹೊಸ ಷರತ್ತುಗಳನ್ನು ವಿಧಿಸಿವೆ.
ಹಣಕಾಸು ಸಂಸ್ಥೆಗಳು ಮುಂದಿಟ್ಟಿರುವ ಹೊಸ ಷರತ್ತುಗಳ ಕುರಿತು ಜು.5ರಂದು ಜನಾದೇಶ ಪಡೆಯುವುದಾಗಿ ಗ್ರೀಕ್ ಪ್ರಧಾನಿ ಅಲೆಕ್ಸಿ ಸಿಪ್ರಾಸ್ ಹೇಳಿದ್ದಾರೆ. ಸಾಲ ಮರುಪಾವತಿಸಲು ಹಣಕಾಸು ಸಂಸ್ಥೆಗಳು ನೀಡಿದ್ದ ಎರಡನೇ ಗಡುವು ಜೂ.30ಕ್ಕೆ ಕೊನೆಗೊಳ್ಳಲಿದೆ. ಸಾಲ ಪಾವತಿಸದಿದ್ದಲ್ಲಿ ಗ್ರೀಕ್ ಸುಸ್ತಿ ದೇಶವಾಗಲಿದ್ದು ಯೂರೋ ಒಕ್ಕೂಟದಿಂದ ಹೊರಬರಬೇಕಾಗುತ್ತದೆ. ಇದರಿಂದ ತಪ್ಪಿಸಿ ಕೊಳ್ಳಲು ಗಡುವನ್ನು ವಿಸ್ತರಿಸಿರುವ ಹಣಕಾಸು ಸಂಸ್ಥೆಗಳು ಹೊಸ ಸಾಲ ನೀಡಬೇಕಾದರೆ ಕಠಿಣ ಮಿತವ್ಯಯ ಕ್ರಮಗಳು ಮತ್ತು ಆರ್ಥಿಕ ಸುಧಾರಣೆಗಳನ್ನು ಕೈ ಗೊಳ್ಳಬೇಕೆಂದು ಒತ್ತಡ ಹೇರಿವೆ.
ಹೊಸ ಷರತ್ತಿನಂತೆ 1,700 ಡಾಲರ್ ನೆರವು ನೀಡಲಿದ್ದು ಮೊದಲ ಕಂತಾಗಿ 200 ಕೋಟಿ ಡಾಲರ್ ನೀಡಲಿವೆ. ಜುಲೈ 5ರ ಜನಾದೇಶ ಹಣಕಾಸು ಸಂಸ್ಥೆಗಳ ಷರತ್ತುಗಳಿಗೆ ವಿರುದ್ಧವಾಗಿದ್ದಲ್ಲಿ ಗ್ರೀಕ್ ಅನಿವಾರ್ಯವಾಗಿ ಯೂರೋ ಗುಂಪಿನಿಂದ ಹೊರಹೋಗಬೇಕಾಗುತ್ತದೆ. ಆಗ ತನ್ನದೇ ಸ್ವಂತ ಕರೆನ್ಸಿ ಮುದ್ರಿಸಿಕೊಂಡು ಹೊಸ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳಬೇಕು. ಬೇರೆ ದೇಶಗಳೊಂದಿಗೆ ಹೊಸ ವಾಣಿಜ್ಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಗ್ರೀಕ್ ನ ಸಾಲ ಆ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಕ್ಕಿಂತಲೂ ಶೇ.180ರಷ್ಟು ಹೆಚ್ಚಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ