27 ಭಾರತೀಯ ಅಧಿಕಾರಿಗಳ ವಿರುದ್ಧ ದೂರು

ವಿದೇಶಗಳಲ್ಲಿರುವ ಕನಿಷ್ಠ 27 ಮಂದಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ವಿರುದ್ಧ ಕಳೆದ ಒಂದು ವರ್ಷದಲ್ಲಿ 40 ರಷ್ಟು ದೂರುಗಳು ದಾಖಲಾಗಿವೆ. ಅದರಲ್ಲೂ 2013-14ರಲ್ಲಿ 10 ಪ್ರಕರಣಗಳು ದಾಖಲಾಗಿದ್ದರೆ 2014-15ರ ವೇಳೆಗೆ ಇದು ಮೂರು ಪಟ್ಟು ಹೆಚ್ಚಾಗಿವೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಮಂತ್ರ ನರೇಂದ್ರ ಮೋದಿ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಮಂತ್ರ ನರೇಂದ್ರ ಮೋದಿ

ನವದೆಹಲಿ: ವಿದೇಶಗಳಲ್ಲಿರುವ ಕನಿಷ್ಠ 27 ಮಂದಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ವಿರುದ್ಧ ಕಳೆದ ಒಂದು ವರ್ಷದಲ್ಲಿ 40 ರಷ್ಟು ದೂರುಗಳು ದಾಖಲಾಗಿವೆ. ಅದರಲ್ಲೂ 2013-14ರಲ್ಲಿ 10 ಪ್ರಕರಣಗಳು ದಾಖಲಾಗಿದ್ದರೆ 2014-15ರ ವೇಳೆಗೆ ಇದು ಮೂರು ಪಟ್ಟು ಹೆಚ್ಚಾಗಿವೆ.

2012ರಲ್ಲಿ ಈ ಸಂಖ್ಯೆ ಕೇವಲ 6 ಆಗಿತ್ತು. ರಾಜತಾಂತ್ರಿಕರ ವಿರುದ್ಧ ಆರೋಪಗಳು ಹೆಚ್ಚುತ್ತಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಸಂಡೇ ಎಕ್ಸ್ ಪ್ರೆಸ್ ವರದಿ ಮಾಡಿದೆ. ನ್ಯೂಜಿಲೆಂಡ್‍ನಲ್ಲಿರುವ ಭಾರತೀಯ ಹೈಕಮಿಷನರ್ ಪತ್ನಿಯು ತಮ್ಮ ಮನೆಯಾಳಿನ ಮೇಲೆ ದೌರ್ಜನ್ಯವೆಸಗಿದ ಆರೋಪದ ಹಿನ್ನೆಲೆಯಲ್ಲಿ ಹೈಕಮಿಷನರ್ ಅನ್ನು ಸರ್ಕಾರ ವಾಪಸ್ ಕರೆದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.

27 ಮಂದಿ ವಿರುದ್ಧತನಿಖೆ: ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಎದುರಿಸುತ್ತಿರುವ ಆರೋಪಗಳಲ್ಲಿ ಹೆಚ್ಚಿನವು ಭ್ರಷ್ಟಾಚಾರ, ದೌರ್ಜನ್ಯ ಮತ್ತು ಕರ್ತವ್ಯ ಲೋಪಕ್ಕೆ ಸಂಬಂಧಿಸಿದವು. ತನಿಖೆ ಎದುರಿಸುತ್ತಿರುವ ಅಧಿಕಾರಿಗಳಲ್ಲಿ ಐವರು ಬ್ರಿಟನ್, ಐವರು ಮಡಗಾಸ್ಕರ್, ಕಜಕಿಸ್ತಾನ್ ಮತ್ತು ಕೀನ್ಯಾದ ತಲಾ ಮೂವರು, ಬೋಟ್ಸ್‍ವಾನಾ ಮತ್ತು ಮಾಲಿಯ ತಲಾ ಇಬ್ಬರು, ಆಫ್ಘನ್, ಆಸ್ಟ್ರಿಯಾ, ಇಟಲಿ, ಜಪಾನ್, ಮೊರೋಕ್ಕೋ, ನೆದರ್ಲೆಂಡ್ ಮತ್ತು ಥಾಯ್ಲೆಂಡ್ ತಲಾ ಒಬ್ಬರು ಸೇರಿದ್ದಾರೆ.

ವಿದೇಶಾಂಗ ಸಚಿವಾಲಯ ರಚಿಸಿದ ವಿವಿಧ ಸಮಿತಿಗಳು ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತಿವೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಂತಹ ಪ್ರಕರಣಗಳ ಬಗ್ಗೆ ವಿದೇಶಾಂಗ ಸಚಿವಾಲಯವು ಹೆಚ್ಚಿನ ನಿಗಾವಹಿಸಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತರ ದೂರಿಗಳಿಗೂ ಆದ್ಯತೆ
ಹಿಂದೆಲ್ಲ ರಾಜತಾಂತ್ರಿಕ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಕೇಳುವವರೇ ಇರಲಿಲ್ಲ. ಆದರೆ ಈಗ ಸರ್ಕಾರದ ಹಿರಿಯ ಅಧಿಕಾರಿಗಳು, ವಿದೇಶಾಂಗ ಸಚಿವರು ಮತ್ತು ಸ್ವತಃ ಪ್ರಧಾನಿ ಮೋದಿ ಅವರೂ ಸಾಮಾಜಿಕ ತಾಮದ ಮೂಲಕ ಸಾಗರೋತ್ತರ ಭಾರತೀಯರ ಸಂಪರ್ಕಕ್ಕೆ ಸಿಗುತ್ತಿದ್ದಾರೆ. ಜತೆಗೆ, ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಅಪರಿಚಿತರು ದೂರು ನೀಡಿದರೂ ಸ್ವೀಕರಿಸಲಾಗುತ್ತದೆ. ಪ್ರಾಥಮಿಕ ತನಿಖೆಯ ಬಳಿಕ ಅದು ನಂಬಲರ್ಹ ೆಂದು ಗೊತ್ತಾದರೆ ತನಿಖೆಯನ್ನು ಮುಂದುವರಿಸಲಾಗುತ್ತದೆ ೆಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com