ಕೊಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಜಾರಿ, ಸ್ಕರ್ಟ್, ಟಿ-ಷರ್ಟ್ ಗೆ ನಿಷೇಧ

ವಿದ್ಯಾರ್ಥಿಗಳು ಧರಿಸುವ ಉಡುಪು ಕಲಿಕೆ ಪರಿಸರದ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಕಾಲೇಜಿನ ಆವರಣದಲ್ಲಿ ನಿರಾಡಂಬರತೆ ಮತ್ತು ಸುರಕ್ಷತೆಯ ಉಡುಪುಗಳನ್ನು ಧರಿಸಬೇಕು- ಸ್ಕಾಟಿಷ್ ಚರ್ಚ್ ಕಾಲೇಜ್ ಆದೇಶ
ಕೋಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜು
ಕೋಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜು

ಕೋಲ್ಕತಾ: ಕೋಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜು ವಿದ್ಯಾರ್ಥಿಗಳಿಗೆ ಸರಳ ಉಡುಗೆ ಧರಿಸಲು ಸೂಚನೆ ನೀಡಿದ್ದು, ಕಾಲೇಜು ನಲ್ಲಿ ವಸ್ತ್ರ ಸಂಹಿತೆ(ಡ್ರೆಸ್ ಕೋಡ್) ಜಾರಿ ಮಾಡಿದೆ.  ವೃತ್ತಾಕಾರದ ಕೊರಳುಪಟ್ಟಿ( ರೌಂಡ್ ನೆಕ್) ಹೊಂದಿರುವ ಟಿ-ಷರ್ಟ್, ಸ್ಕರ್ಟ್ ಧರಿಸುವುದನ್ನು ಚರ್ಚ್ ಕಾಲೇಜು ನಿಷೇಧಿಸಿದೆ.
ಸ್ಕಾಟಿಷ್ ಕಾಲೇಜಿನ ಈ ಕ್ರಮಕ್ಕೆ ಶಿಕ್ಷಣತಜ್ಞರು, ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಧರಿಸುವ ಉಡುಪು ಕಲಿಕೆ ಪರಿಸರದ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಕಾಲೇಜಿನ ಆವರಣದಲ್ಲಿ ನಿರಾಡಂಬರತೆ ಮತ್ತು ಸುರಕ್ಷತೆಯ ಉಡುಪುಗಳನ್ನು ಧರಿಸಬೇಕೆಂದು ಸ್ಕಾಟಿಷ್ ಕಾಲೇಜ್ ನ ಆಡಳಿತ ಮಂಡಲಿ ನೊಟೀಸ್ ಬೋರ್ಡ್ ನಲ್ಲಿ ಸೂಚನೆ ನೀಡಿದೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವಾತಾವರಣಕ್ಕೆ ಪೂರಕವಾಗಿರುವಂತಹ ಉಡುಪನ್ನು ಮಾತ್ರ ಧರಿಸಬೇಕು, ರೌಂಡ್ ನೆಕ್ ಟಿ-ಷರ್ಟ್, ಸ್ಕರ್ಟ್ ಧರಿಸಬಾರದು ಎಂದು ಸ್ಕಾಟಿಷ್ ಚರ್ಚ್ ನ ಆಡಳಿತ ಮಂಡಳಿ ಆದೇಶ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು, ಕೆಲ ಶಿಕ್ಷಣ ತಜ್ಞರು ಪ್ರತಿಭಟನೆ ನಡೆಸುತ್ತಿದ್ದಾರೆ.  

ಬರಹಗಳನ್ನು/ ಶೀರ್ಷಿಕೆಗಳು ಮುದ್ರಿತವಾಗಿರುವ ಟಿ-ಷರ್ಟ್ ಹಾಗೂ ಸ್ಕರ್ಟ್ ಗಳನ್ನು ನಿಷೇಧಿಸಿರುವ ಚರ್ಚ್ ಕಾಲೇಜು, ಉದ್ದದ ಪ್ಯಾಂಟ್ ಗಳನ್ನು ಮಾತ್ರ ಧರಿಸಬೇಕೆಂದು ಹೇಳಿದೆ.  ಕಾಲೇಜಿನ ಈ ಕ್ರಮ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುತಿದೆ ಎಂದು ಆರೋಪಿಸಿ ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com