ಟ್ವಿಟರ್‍ನಲ್ಲಿ ಸೆಲ್ಫಿ ವಿತ್‍ ಡಾಟರ್ ಟ್ರೆಂಡ್

ಹೆಚ್ಚುತ್ತಿರುವ ಲಿಂಗಾನುಪಾತಕ್ಕೆ ಕಡಿವಾಣ ಹಾಕಲು ಹರ್ಯಾಣದ ಗ್ರಾಮವೊಂದರ ಮುಖ್ಯಸ್ಥರೊಬ್ಬರು ಇಟ್ಟಿದ್ದ 'ಪುತ್ರಿಯರ ಜತೆಗೆ...
ಮಗಳು ಝೀವಾಳೊಂದಿಗೆ ಎಂಎಸ್ ಧೋನಿ
ಮಗಳು ಝೀವಾಳೊಂದಿಗೆ ಎಂಎಸ್ ಧೋನಿ

ಹೆಚ್ಚುತ್ತಿರುವ ಲಿಂಗಾನುಪಾತಕ್ಕೆ ಕಡಿವಾಣ ಹಾಕಲು ಹರ್ಯಾಣದ ಗ್ರಾಮವೊಂದರ ಮುಖ್ಯಸ್ಥರೊಬ್ಬರು ಇಟ್ಟಿದ್ದ 'ಪುತ್ರಿಯರ ಜತೆಗೆ ಸೆಲ್ಫಿ'' ಸ್ಪರ್ಧೆಗೆ ಪ್ರಧಾನಿ ನರೇಂದ್ರ ಮೋದಿ ಆಂದೋಲನದ ರೂಪ ನೀಡಿದ್ದಾರೆ.

ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ರೇಡಿಯೋದಲ್ಲಿ ಮಾತನಾಡಿದ ಅವರು, 'ಪುತ್ರಿಯರ ಜತೆಗೆ ಸೆಲ್ಫಿ'ಯು 'ಬೇಟಿ ಬಚಾವೋ, ಬೇಟಿ ಪಡಾವೋ' ಅನ್ನು ಜನಾಂದೋಲನವನ್ನಾಗಿ ರೂಪಿಸಲು ಸೂಕ್ತ ಮಾರ್ಗ ಎಂದು ಮೋದಿ ಹೇಳಿದ್ದಾರೆ.

ದೇಶದ 100ಗಳಲ್ಲಿ ಹೆಚ್ಚುತ್ತಿರುವ ಲಿಂಗಾನುಪಾತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಈ ಸಂಬಂಧ ಪ್ರತಿಯೊಬ್ಬರೂ ಪುತ್ರಿ ಯರ ಜತೆಗೆ ಸೆಲ್ಫಿ ತೆಗೆದು ಟ್ವೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ರೀತಿ ಮಾಡಿದ ಟ್ವೀಟ್‍ಗಳಲ್ಲಿ ಕೆಲವನ್ನು ಖುದ್ದಾಗಿ ರೀಟ್ವೀಟ್ ಮಾಡುವುದಾಗಿಯೂ ಮೋದಿ ಭರವಸೆ ನೀಡಿದ್ದಾರೆ.

ಮೋದಿ ಕರೆಗೆ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸೇರಿ ಅನೇಕ ಬಿಜೆಪಿ ಮುಖಂಡರು, ಸಾರ್ವಜನಿಕರು ಪುತ್ರಿಯರ ಜತೆಗಿನ ಸೆಲ್ಫಿಯನ್ನು ಟ್ವಿಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದು ಟ್ವಿಟರ್‍ನ ಟಾಪ್ ಟ್ರೆಂಡ್ ಆಗಿತ್ತು. ಇದಕ್ಕೂ ಮೊದಲು ಮಾತನಾಡಿದ ಮೋದಿ, 'ಇತ್ತೀಚೆಗಷ್ಟೇ ಹರ್ಯಾಣದ ಬಿಬಿಪುರ್ ಗ್ರಾಮದ ಮುಖ್ಯಸ್ಥ ಸುನಿಲ್ ಜಗ್ಲಾನ್ ಆಸಕ್ತಿಕರ ಕಾರ್ಯ ಕೈಗೆತ್ತಿಕೊಂಡಿದ್ದರು. ಎಲ್ಲರಿಗೂ ಪುತ್ರಿಯರ ಜತೆ ಸೆಲ್ಫಿ ತೆಗೆದು ಪೋಸ್ಟ್ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಎಲ್ಲರೂ ಪುತ್ರಿಯರ ಜತೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com