ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಪಂಕಜ ಮುಂಡೆ

206 ಕೋಟಿ ರೂಪಾಯಿಗಳ ಚಿಕ್ಕಿ ಹಗರಣದಲ್ಲಿ ತನ್ನ ವಿರುದ್ಧದ ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಹೊಂದುವುದಾಗಿ...
ಪಂಕಜ ಮುಂಡೆ
ಪಂಕಜ ಮುಂಡೆ

ಮುಂಬಯಿ: 206 ಕೋಟಿ ರೂಪಾಯಿಗಳ ಚಿಕ್ಕಿ ಹಗರಣದಲ್ಲಿ ತನ್ನ ವಿರುದ್ಧದ ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಹೊಂದುವುದಾಗಿ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ.

ಚಿಕ್ಕಿ ಹಗರಣ ಸಂಬಂಧ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಪಂಕಜ ಮುಂಡೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ,  ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಇಲಾಖೆಯ ಕಾನೂನಿನಂತೆ ಟೆಂಡರ್ ಪ್ರಕ್ರಿಯೆ ನಡೆಸಿರುವುದಾಗಿ ಪಂಕಜ ಸಮರ್ಥಿಸಿಕೊಂಡಿದ್ದಾರೆ. ಭ್ರಷ್ಚಾಚಾರ ವಿರೋಧಿ ಶಾಖೆಗೆ ಎಲ್ಲಾ ಎಲ್ಲಾ ದಾಖಲೆಗಳನ್ನು ನೀಡಿದ್ದು, ತಪ್ಪು ರುಜುವಾತದರೇ ರಾಜಕೀಯ ಬಿಡುವುದಾಗಿ ತಿಳಿಸಿದ್ದಾರೆ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಡಕಟ್ಟು ಜನಾಂಗ ಮಕ್ಕಳಿಗೆ ನೀಡುವ ಚಿಕ್ಕಿ,ಮ್ಯಾಟ್, ಪುಸ್ತಕ ಹಾಗೂ ಇನ್ನಿತರೆ ವಸ್ತುಗಳಿಗೆ ನೀಡಿರುವ ಟೆಂಡರ್ ಕಾನೂನು ಬಾಹಿರವಾಗಿದೆ. ಹೀಗಾಗಿ ಪಂಕಜ ಮುಂಡೆ ರಾಜೀನಾಮೆ  ನೀಡಬೇಕೆಂದು ಮಹಾರಾಷ್ಟ್ರ ಕಾಂಗ್ರೆಸ್ ಆಗ್ರಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com