ವಿಕಿಪೀಡಿಯ ಪುಟದಲ್ಲಿ ನೆಹರೂ ವೈಯಕ್ತಿಕ ಮಾಹಿತಿ ತಿದ್ದಿದ ಕೇಂದ್ರ ಸರ್ಕಾರ

ವಿಕಿಪೀಡಿಯ ಪುಟದಲ್ಲಿರುವ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಕೇಂದ್ರ ಸರ್ಕಾರ ತಿದ್ದಿರುವುದಾಗಿ ಬುಧವಾರ ತಿಳಿದುಬಂದಿದೆ...
ಇಂದಿರಾಗಾಂಧಿ ಮತ್ತು ಜವಾಹರ್ ಲಾಲ್ ನೆಹರೂ
ಇಂದಿರಾಗಾಂಧಿ ಮತ್ತು ಜವಾಹರ್ ಲಾಲ್ ನೆಹರೂ

ನವದೆಹಲಿ: ವಿಕಿಪೀಡಿಯ ಪುಟದಲ್ಲಿರುವ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಕೇಂದ್ರ ಸರ್ಕಾರ ತಿದ್ದಿರುವುದಾಗಿ ಬುಧವಾರ ತಿಳಿದುಬಂದಿದೆ.

ಕೇಂದ್ರ ಸರ್ಕಾರ ಕಚೇರಿಯ ಐಪಿ ವಿಳಾಸದಿಂದ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಬದಲು ಮಾಡಲಾಗಿದ್ದು, ಬದಲಾಗಿರುವ ಮಾಹಿತಿಯ ಪ್ರಕಾರ, ನೆಹರೂ ಅವರ ಅಜ್ಜ ಗಂಗಾಧರ್ ನೆಹರು ಅವರು ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ನೆಹರೂ ಅವರು ಅಲಹಬಾದ್ ನ ರೆಡ್ ಲೈಟ್ ಪ್ರದೇಶದಲ್ಲಿ ಹುಟ್ಟಿದವರಾಗಿದ್ದಾರೆಂದು ತಿಳಿಸಲಾಗಿದೆ.  ನೆಹರೂ ಅವರ ವೈಯಕ್ತಿಕ ಮಾಹಿತಿ ಬದಲಾಯಿಸಿರುವ ವ್ಯಕ್ತಿ ಯಾರೆಂಬುದು ತಿಳಿದುಬಂದಿಲ್ಲ. ಆದರೆ, ಮಾಹಿತಿ ತಿದ್ದಿರುವುದು ಸರ್ಕಾರಕ್ಕೆ ಸಂಬಂಧಿಸಿದ ಐಪಿ ವಿಳಾಸದಿಂದಲೇ ಎಂದು ಹೇಳಲಾಗುತ್ತಿದೆ.

ಐಪಿ ವಿಳಾಸ ನೀಡುವುದು ಎನ್ಐಸಿ (ನೆಟ್ ವರ್ಕ್ ಇಂಟರ್ ಫೇಸ್ ಕಂಟ್ರೋಲರ್) ಸಂಸ್ಥೆ. ಹಾಗಾಗಿ ಎನ್ಐಸಿ ನೆಟ್ ವರ್ಕ್ ನಲ್ಲಿ ಬಹಳ ಜನ ಇರುವುದರಿಂದ ಅವರಲ್ಲಿ ಯಾರು ಈ ರೀತಿಯಾಗಿ ಮಾಹಿತಿ ತಿದ್ದಿದ್ದಾರೆ ಎಂಬುದನ್ನು ಹುಡುಕುವುದು ಕಷ್ಟಕರವಾಗಿದೆ ಎಂದು ಅಂತರ್ಜಾಲ ಮತ್ತು ಸಮಾಜ ಸಂಸ್ಥೆಯ ನೀತಿ ನಿರ್ದೇಶಕ ಪ್ರಾಣೇಶ್ ಪ್ರಕಾಶ್ ಹೇಳಿದ್ದಾರೆ.

ನೆಹರು ಅವರ ವೈಯಕ್ತಿಕ ಮಾಹಿತಿ ತಿದ್ದಿರುವ ಕುರಿತಂತೆ ಈಗಾಗಲೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ನೆಹರು ಹಾಗೂ ಅವರ ತಂದೆ ಮೋತಿಲಾಲ್ ನೆಹರೂ ಅವರು ಹಿಂದು ಆದರೇನು ಅಥವಾ ಮುಸ್ಲಿಂ ಆದರೇನು ಅದರಿಂದ ಏನು ಆಗಬೇಕಿದೆ. ಅವರೊಬ್ಬ ಭಾರತೀಯ ಎಂಬುದಷ್ಟೇ ಮುಖ್ಯವಾಗುತ್ತದೆ. ನೆಹರು ಅವರ ವೈಯಕ್ತಿಕ ಮಾಹಿತಿ ತಿದ್ದಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕೂಡಲೇ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com