ಹೆಣ್ಣು ಮಗು ಹುಟ್ಟಿತೆಂದು ಬೀದಿಗೆ ಎಸೆದ ಪೋಷಕರಿಗೆ 5 ವರ್ಷ ಜೈಲು ಶಿಕ್ಷೆ

ಹುಟ್ಟಿದ ಮಗು ಹೆಣ್ಣಾದ ಕಾರಣ ಬೀದಿಯಲ್ಲಿ ಎಸೆದು ಹೋಗಿದ್ದ ತಂದೆ-ತಾಯಿಗೆ ಮಧ್ಯಪ್ರದೇಶ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆ(ಸಾಂಕೇತಿಕ ಚಿತ್ರ)
ಜೈಲು ಶಿಕ್ಷೆ(ಸಾಂಕೇತಿಕ ಚಿತ್ರ)

ಮೊರೆನಾ(ಮಧ್ಯಪ್ರದೇಶ): ಹುಟ್ಟಿದ ಮಗು ಹೆಣ್ಣಾದ ಕಾರಣ ಬೀದಿಯಲ್ಲಿ ಎಸೆದು ಹೋಗಿದ್ದ ತಂದೆ-ತಾಯಿಗೆ ಮಧ್ಯಪ್ರದೇಶ ನ್ಯಾಯಾಲಯ 5 ವರ್ಷಗಳ ಶಿಕ್ಷೆ ಹಾಗೂ ತಲಾ 1 ,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಮಧ್ಯಪ್ರದೇಶದ ಅಂಬಾ ತಹ್ಶೀಲ್ ನ ಸೆಷನ್ಸ್ ನ್ಯಾಯಾಲಯದ ನ್ಯಾ.ಪಿ.ಸಿ ಗುಪ್ತ ಈ ತೀರ್ಪು ನೀಡಿದ್ದಾರೆ. 2014 ರ ಆಗಸ್ಟ್ 21 ರಂದು ಅಕ್ಷಯ್ ಎಂಬುವವರ ಪತ್ನಿ ಸುನಿತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಹೆಣ್ಣು ಮಗು ಹುಟ್ಟಿದರಿಂದ, ಆಸ್ಪತ್ರೆಯಿಂದ ಮನೆಗೆ ಬರುವ ಮಾರ್ಗ ಮಧ್ಯದ ಜಮೀನಿನಲ್ಲಿ ಮಗುವನ್ನು ಎಸೆದಿದ್ದರು. ಈ ಆರೋಪ ಸಾಬೀತಾಗಿದ್ದರಿಂದ ಸೆಷನ್ಸ್ ನ್ಯಾಯಾಲಯ ಮಗುವಿನ ಪೋಷಕರಿಗೆ ಶಿಕ್ಷೆ ವಿಧಿಸಿದೆ.

ಜಮೀನಿನಲ್ಲಿ ಅನಾಥವಾಗಿದ್ದ ಮಗುವಿನ ಅಳುವನ್ನು ಕೇಳಿದ್ದ ಗ್ರಾಮಸ್ಥರು ಅದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳೀಯ ಆಸ್ಪತ್ರೆಗಳಲ್ಲಿ ಹುಟ್ಟಿದ್ದ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದು ಸುನಿತಾ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಮಗುವನ್ನು ಎಸೆದಿರುವುದನ್ನು ಒಪ್ಪಿಕೊಂಡಿದ್ದರು. ಅಷ್ಟೆ ಅಲ್ಲದೇ ಪೊಲೀಸರ ವಶದಲ್ಲಿ ತಮ್ಮ ಮಗುವನ್ನು ವಾಪಸ್ ಪಡೆದಿದ್ದರು.

ಹೆಣ್ಣುಮಗುವನ್ನು ಬೀದಿಯಲ್ಲಿ ಎಸೆದಿದ್ದ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 317 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com