ಡಿಜಿಟಲ್ ಇಂಡಿಯಾ ಸಪ್ತಾಹ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ಸಂಜೆ 4 ಕ್ಕೆ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿವೆ.
ಡಿಜಿಟಲ್ ಇಂಡಿಯಾ ಸಪ್ತಾಹದ ಲೋಗೊ(ಸಂಗ್ರಹ ಚಿತ್ರ)
ಡಿಜಿಟಲ್ ಇಂಡಿಯಾ ಸಪ್ತಾಹದ ಲೋಗೊ(ಸಂಗ್ರಹ ಚಿತ್ರ)
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ಸಂಜೆ 4 ಕ್ಕೆ ಚಾಲನೆ ನೀಡಲಿದ್ದಾರೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಉಂಟುಮಾಡಲು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತಿದೆ.

ಡಿಜಿಟಲ್ ಇಂಡಿಯಾ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 2014 ರ ಚುನಾವಣೆಯಲ್ಲಿ ದೇಶದ ಮೂಲೆ ಮೂಲೆಗೆ ತಲುಪಲು ನರೇಂದ್ರ ಮೋದಿ ಡಿಜಿಟಲ್ ಟೆಕ್ನಾಲಜಿಯನ್ನು ಸಮಾರ್ಥವಾಗಿ ಬಳಸಿಕೊಂಡಿದ್ದರು.  ಮಾಹಿತಿ ತಂತ್ರಜ್ಞಾನದ ಬಳಕೆಗೆ ಮತ್ತಷ್ಟು ಉತ್ತೇಜನ ನೀಡಲು ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತಿದೆ.

ಡಿಜಿಟಲ್ ಇಂಡಿಯಾ ಸಪ್ತಾಹದ ಕುರಿತು ಕೆಲವು ಕುತೂಹಲಕಾರಿ ವಿಷಯಗಳು:

  • ಜು.1 ರಂದು ಚಾಲನೆ ನೀಡುವುದರಿಂದ ಜುಲೈ ಮೊದಲ ವಾರವನ್ನು ಡಿಜಿಟಲ್ ಇಂಡಿಯಾ ಸಪ್ತಾಹ ಎಂದು ಆಚರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.
  • ಅಭಿವೃದ್ಧಿಗೆ ಸಂಬಂಧಿಸಿದ ವೈಬ್ರೆಂಟ್ ಗುಜರಾತ್ ಎಂಬ ಕಾರ್ಯಕ್ರಮದ ಮಾದರಿಯಲ್ಲಿ ಡಿಜಿಟಲ್ ಇಂಡಿಯಾದ ಪರಿಕಲ್ಪನೆ ರೂಪುಗೊಂಡಿದೆ. 
  • ಡಿಜಿಟಲ್ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 8000 - 10 ,000 ಜನರು ಭಾಗವಹಿಸಲಿದ್ದಾರೆ.
  • ವಿವಿಧ ಕಂಪನಿಗಳ 400 ಕ್ಕೂ ಅಧಿಕ ಹಿರಿಯ ಸಿಇಒ ಗಳು ಭಾಗವಹಿಸಲಿದ್ದಾರೆ.
  • ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ, ಟಾಟಾ ಗೂಪ್ ನ ಸಿಇಓ ಸೈರಸ್ ಮಿಸ್ತ್ರಿ ಸೇರಿದಂತೆ ಉದ್ಘಾಟನಾ ಸಮಾರಂಭಕ್ಕೆ ಸುಮಾರ 1,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ.
  • ಐಟಿ ಕ್ಷೇತ್ರದ ಹಿರಿಯರೊಂದಿಗೆ ಸರ್ಕಾರಿ ಕಾರ್ಯದರ್ಶಿಗಳು, ಐಟಿ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ.  
  • ಉದ್ಘಾಟನಾ ಕಾರ್ಯಕ್ರಮದಲ್ಲಿ, ಕೃಷಿ ಕೇಂದ್ರಿತ ವೆಬ್ ಸೈಟ್, ವಿದ್ಯಾರ್ಥಿಗಳಿಗಾಗಿ ಇ- ಸ್ಕೂಲ್ ಬ್ಯಾಗ್ ಸೇರಿದಂತೆ ಹಲವು ಒಪ್ಪಂದಗಳು ನಡೆಯಲಿದೆ. 
  • ಮೈ ಗೌರ್ನಮೆಂಟ್, ಕ್ಲೀನ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆಗಳ ಮೊಬೈಲ್ ಆಪ್ ಬಿಡುಗಡೆಯಾಗಲಿದೆ.
  • ಪ್ಯಾನ್ ಕಾರ್ಡ್, ಮಾರ್ಕ್ಸ್ ಶೀಟ್, ಪಾಸ್ಪೋರ್ಟ್, ಪದವಿ ಪ್ರಮಾಣ ಪತ್ರ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯವಿರುವ ಹಲವು ದಾಖಲೆಗಳನ್ನು ಸಂಗ್ರಹಿಸಲು ಡಿಜಿಟಲ್ ಲಾಕರ್ ವ್ಯವಸ್ಥೆಗೆ ಚಾಲನೆ
  • ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್ ಲೈನ್ ನಲ್ಲಿ ಪೂರೈಸುವುದು ಹಾಗೂ ಜನನ ಮರಣ ಪತ್ರಗಳನ್ನು ಆನ್ ಲೈನ್ ನಲ್ಲಿ ಪಡೆಯುವ ವ್ಯವಸ್ಥೆಗೆ ಚಾಲನೆ ನೀಡುವ ಸಾಧ್ಯತೆ .
  • ಡಿಜಿಟಲ್ ಇಂಡಿಯಾ ಯೋಜನೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ಅವರಿಂದ ಬ್ರಾಂಡ್ ಅಂಬಾಸಿಡರ್ ಗಳ ಘೋಷಣೆ ಸಾಧ್ಯತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com